ಮುಲ್ಕಿ: ಜಯಂಟ್ಸ್ ಗ್ರೂಪ್ ಹಾಗೂ ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಮತ್ತು ಕಾರ್ನಾಡ್ ಜನೌಷಧಿ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ವಿವಿಧ ತಳಿಯ ಗಿಡಗಳ ಉಚಿತ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕಾರ್ನಾಡ್ ಜನೌಷಧಿ ಕೇಂದ್ರದ ಸುಂದರ ಪೂಜಾರಿ ಮಾತನಾಡಿ ಪ್ರತಿಯೊಬ್ಬ ನಾಗರಿಕರು ಗಿಡಗಳನ್ನು ನೆಡುವ ಮೂಲಕ ಅದರ ಪೋಷಣೆಯ ಕರ್ತವ್ಯ ಮುಖ್ಯವಾಗಿದ್ದು ಪರಿಸರ ಸಂರಕ್ಷಣೆ ನಮ್ಮ ಧ್ಯೇಯ ವಾಗಿರಲಿ ಎಂದರು.
ಈ ಸಂದರ್ಭ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮುಖ್ಯಾಧಿಕಾರಿ ಚಂದ್ರಪೂಜಾರಿ, ಸುವರ್ಣ ಎಂಟರ್ಪ್ರೈಸಸ್ ನ ಮಧುಸೂದನ್ ಹೇರೂರು, ಉದ್ಯಮಿ ಚಂದ್ರಹಾಸ ಸುವರ್ಣ ನಡಿಕುದ್ರು, ನಜೀರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಪರಿಸರದ ನಾಗರಿಕರಿಗೆ ಕರಿಮೆಣಸು, ಸಾಗುವಾನಿ, ಗೇರು, ಮಾವು, ಪುನರ್ಪುಳಿ, ದಾಳಿಂಬೆ, ಲಕ್ಷ್ಮಣಫಲ, ಬಿಲ್ವಪತ್ರೆ, ಹಲಸು, ನೆಲ್ಲಿ ಸಹಿತ ವಿವಿಧ ತಳಿಯ ಸುಮಾರು 600 ಗಿಡಗಳನ್ನು ವಿತರಿಸಲಾಯಿತು.
Kshetra Samachara
07/08/2021 12:33 pm