ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಆಹೋರಾತ್ರಿ ರಕ್ಷಣೆ ಮಾಡಿದ ಯುವಕರ ತಂಡ!

ಉಡುಪಿ: ಮಗಳ‌ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸತ್ತು ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಉಡುಪಿಯ ಕುಕ್ಕಿಕಟ್ಟೆಯಲ್ಲಿ ನಡೆದಿದೆ.ಸ್ಥಳೀಯ ನಿವಾಸಿ ಬಾಲಕೃಷ್ಣ ಭಟ್ ಆತ್ಮಹತ್ಯೆಗೆ ಯತ್ನಿಸಿದವರು. ಕುರ್ಕಾಲುವಿನ ಪಾಪನಾಶಿನಿ ನದಿಗೆ ಹಾರಿದ ಬಾಲಕೃಷ್ಣ ಭಟ್ ಅವರನ್ನು ಸಾಹಸಿ ಯುವಕರ ತಂಡ ರಾತ್ರೋರಾತ್ರಿ ಕಾರ್ಯಾಚರಣೆ ಮಾಡಿ ರಕ್ಷಿಸಿದೆ.

ಈಶ್ವರ್ ಮಲ್ಪೆ ಮತ್ತು ಸತ್ಯದ ತುಳುವೆರ್ ತಂಡದ ಯುವಕರು ರಾತ್ರಿ 12 ಗಂಟೆಗೆ ನದಿಗೆ ಹಾರಿದ ವ್ಯಕ್ತಿಯನ್ನು ಸತತ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಿತು.ಮಧ್ಯರಾತ್ರಿ ಜೋರು ಗಾಳಿಮಳೆಯ ನಡುವೆ ವ್ಯಕ್ತಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದು ಜನರಿಂದ ಮೆಚ್ಚುಗೆಗೆ ಪಾತ್ರವಾಯಿತು.

Edited By : Manjunath H D
Kshetra Samachara

Kshetra Samachara

06/08/2021 11:26 am

Cinque Terre

12.43 K

Cinque Terre

2

ಸಂಬಂಧಿತ ಸುದ್ದಿ