ಮೂಡುಬಿದಿರೆ: ಇಲ್ಲಿನ ಅರಮನೆ ಬಾಗಿಲು ಬಳಿ ವಿಶೇಷ ಮಕ್ಕಳಿಗೆ ಕಳೆದ 4 ವರ್ಷಗಳಿಂದ ಉಚಿತ ಶಿಕ್ಷಣ ಹಾಗೂ ತರಬೇತಿ ನೀಡುತ್ತಿರುವ ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಅವರು ಅಂಗಾಂಗವನ್ನು ದಾನ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
50ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿರುವ ಪ್ರಕಾಶ್ ಶೆಟ್ಟಿಗಾರ್ ಅವರು ಮಂಗಳವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಂಗಾಂಗ ದಾನ ಮಾಡುತ್ತಿರುವುದರ ಬಗ್ಗೆ ತಿಳಿಸಿದರು. ನಮ್ಮ ಮರಣದ ನಂತರ ಕಣ್ಣು ಅಥವಾ ಇತರ ಅಂಗಗಳು ಮಣ್ಣು ಸೇರದೆ ಇತರರ ದೇಹಕ್ಕೆ ಜೋಡಣೆ ಮಾಡಿದರೆ ಅವರಿಗೆ ಸಹಾಯವಾಗಬಹುದು ಹಾಗೂ ನಾವು ಅಂಗಾAಗವನ್ನು ದಾನ ಮಾಡುವುದರಿಂದ ಇನ್ನೊಬ್ಬರು ಪ್ರೇರಣೆಯಾಗಿ ಅವರು ಕೂಡಾ ದಾನ ಮಾಡಿದರೆ ತುಂಬಾ ಜನರಿಗೆ ಉಪಕಾರವಾಗಬಹುದು. ಮರಣ ಹೊಂದಿದ ನಂತರ ಕಣ್ಣುಗಳನ್ನು ದಾನ ಮಾಡುವುದರಿಂದ ದೇಶದಲ್ಲಿರುವ ಕುರುಡರ ಸಂಖ್ಯೆ ಕಡಿಮೆಯಾಗಬಹುದೆನ್ನುವ ವೈದ್ಯರೋರ್ವರ ಮಾತಿನಿಂದ ಪ್ರೇರೇಪಿತನಾಗಿ ತಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದರು. ಮಂಗಳೂರಿನ ತಜ್ಞ ವೈದ್ಯರ ಸಂಘ ಮಾಜಿ ಅಧ್ಯಕ್ಷ ಡಾ. ಕೆ.ಆರ್ ಕಾಮತ್ ಅವರೊಂದಿಗೆ ಮಾತನಾಡಿ ಅಂಗಾಂಗ ದಾನದ ಅರಿವಿನ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ್ದೇನೆತಾನು ಅಂಗಾAಗ ದಾನ ಮಾಡುತ್ತಿರುವ ನಿರ್ಧಾರದ ಬಗ್ಗೆ ತನ್ನ ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿಯ ಸಹಮತವಿದೆ ಎಂದರು.
ಕಳೆದ ಹಲವು ವರ್ಷಗಳಿಂದ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. ಅವರು ಅಂಗಾAಗವನ್ನು ದಾನ ಮಾಡುತ್ತಿರುವ ನಿರ್ಧಾರದ ಬಗ್ಗೆ ನಮ್ಮ ಮನೆಯವರಿಗೆಲ್ಲ ಖುಷಿ ಇದೆ ಎಂದು ಪ್ರಕಾಶ್ ಶೆಟ್ಟಿಗಾರ್ ಅವರ ಪುತ್ರಿ ಪೂಜಿತಾ ಶೆಟ್ಟಿಗಾರ್ ತಿಳಿಸಿದರು.
Kshetra Samachara
03/08/2021 06:14 pm