ಬೈಂದೂರು : ಗಂಗೊಳ್ಳಿಯಲ್ಲಿ ಕಸದ ವಿಲೇವಾರಿ ಘಟಕ ಇದ್ದರೂ ಎಲ್ಲೆಂದರಲ್ಲಿ ಕಸ ಬಿಸಾಡಿ ಇಡೀ ಗ್ರಾಮ ದಲ್ಲಿ ಕಸದ ರಾಶಿ ಯೇ ಕಾಣಿಸುತ್ತಿದೆ.ಕಸವಿಲೆವಾರಿಗೆ ಗ್ರಾಮ ಪಂಚಾಯತ್ ಸರಿಯಾದ ವ್ಯವಸ್ಥೆ ಮಾಡದ ಕಾರಣ ಆಡಳಿತ ಮಂಡಳಿಯ ವಿರುದ್ಧ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಪ್ಲಾಸ್ಟಿಕ್ ಅನ್ನು ರಸ್ತೆ ಬದಿಯಲ್ಲಿ ಬಿಸಾಡಿದರ ಪರಿಣಾಮವಾಗಿ ಗೋವೊಂದು ಪ್ಲಾಸ್ಟಿಕ್ ತಿಂದು ಮೃತಪಟ್ಟಿರುವಂತ ಘಟನೆ ಕೂಡ ನಡೆದಿದೆ.ಗಂಗೊಳ್ಳಿ ಗ್ರಾಮ ಪಂಚಾಯತ್ ಗೆ ವಾರಕ್ಕೆ 3 ದಿನ ಬಂದು ಹೋಗುವ ಪಿಡಿಒ, ವ್ಯವಸ್ಥೆ ಸರಿಪಡಿಸುವುದನ್ನು ಬಿಟ್ಟು ,ಪ್ರಶ್ನೆ ಮಾಡಿದವರಿಗೆ ಅಸಭ್ಯ ವರ್ತನೆ ತೋರುವುದಲ್ಲದೇ ಕೆಟ್ಟ ಪದಗಳನ್ನು ಬಳಸಿ ದರ್ಪ ಮೆರೆಯುತ್ತಿದ್ದು.ಇವರ ಈ ದುರ್ನಡತೆಯನ್ನು ಹೇಳುವರಿಲ್ಲ. ಕೇಳುವರಿಲ್ಲ ! ಎಂಬಂತಾಗಿದೆ.ಇಂತಹ ಭ್ರಷ್ಟ ವ್ಯವಸ್ಥೆಯ ವಿರುದ್ಧ ಸ್ಥಳೀಯರು ಇದೀಗ ತಿರುಗಿ ಬಿದ್ದಿದ್ದು.ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸುತ್ತಿದ್ದಾರೆ.
ಇನ್ನು ಪ್ಲಾಸ್ಟಿಕ್ ತಿಂದು ಮೃತಪಟ್ಟ ಗೋವಿನ ಅಂತ್ಯಕ್ರಿಯೆಯನ್ನು ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಕಾರ್ಯಕರ್ತರು ನೆರವೇರಿಸಿದ್ದಾರೆ.
ವರದಿ :ದಾಮೋದರ ಮೊಗವೀರ ನಾಯಕವಾಡಿ
Kshetra Samachara
31/07/2021 11:44 am