ಮಂಗಳೂರು: ಬರಲೇ ಇಲ್ಲ ಪರಿವಾರ!; 'ಅನಾಥ' ಶವಗಳಿಗೆ ಕಾರ್ಪೊರೇಟರ್ ಅಂತ್ಯಸಂಸ್ಕಾರ

ಮಂಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಇಂದು ಮೃತದೇಹಗಳ ಅಂತ್ಯಸಂಸ್ಕಾರಕ್ಕೂ ರಕ್ತಸಂಬಂಧಿಗಳು, ಒಡಹುಟ್ಟಿದವರೇ ಗೈರುಹಾಜರಾಗುವ ಈ ಕಾಲ ಘಟ್ಟದಲ್ಲಿ ಮನಪಾ ಕಾರ್ಪೊರೇಟರ್ ಒಬ್ಬರು ವಾರೀಸುದಾರರಿಲ್ಲದ, ಅಂತ್ಯಸಂಸ್ಕಾರ ನೆರವೇರಿಸಲು ಯಾರೂ ಮುಂದೆ ಬಾರದ ಮೃತದೇಹಗಳಿಗೆ ಸ್ವತಃ ಅಂತ್ಯಕ್ರಿಯೆ ನೆರವೇರಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.

ದೇರೆಬೈಲ್ ವಾರ್ಡ್ ಕಾರ್ಪೊರೇಟರ್ ಗಣೇಶ್ ಕುಲಾಲ್ ಎರಡು ವಾರಗಳಿಂದ ಈ ಸತ್ಕಾರ್ಯ ಮಾಡುತ್ತಿದ್ದು, ಎರಡು ವಾರಗಳಲ್ಲಿ ವಾರೀಸುದಾರರಿಲ್ಲದ 12 ಮೃತದೇಹಗಳಿಗೆ ತಾವೇ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇದರಲ್ಲಿ 9‌ ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟವರಾಗಿದ್ದು, ಉಳಿದ ಮೂರು ಮಂದಿ ಸಾಮಾನ್ಯ ರೀತಿ ಮೃತಪಟ್ಟವರು. ಅಲ್ಲದೆ, ಕೇರಳ ರಾಜ್ಯ ಹಾಗೂ ಮಡಿಕೇರಿ ಜಿಲ್ಲೆಯ ಎರಡು ಮೃತದೇಹಗಳಿಗೂ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮತ್ತೆಲ್ಲ ಮೃತದೇಹವೂ ಮಂಗಳೂರು ತಾಲೂಕಿಗೆ ಸಂಬಂಧಪಟ್ಟವರದ್ದೇ ಆಗಿದೆ. 12ರಲ್ಲಿ ಐವರು ಮಹಿಳೆಯರಾಗಿದ್ದು, ಉಳಿದ ಏಳು ಮಂದಿ ಪುರುಷರಾಗಿದ್ದಾರೆ.‌ ಈ ಮೃತದೇಹಗಳನ್ನು ನಂದಿಗುಡ್ಡೆ ಹಾಗೂ ಬೋಳೂರು ಚಿತಾಗಾರದಲ್ಲಿ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಿದ್ದಾರೆ.

ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಾರ್ ರೂಂನ ಜವಾಬ್ದಾರಿಯನ್ನೂ ಹೊಂದಿರುವ ಗಣೇಶ್ ಕುಲಾಲ್, ಬರೀ ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾತ್ರವಲ್ಲದೆ, ಅಗತ್ಯವಿರುವವರಿಗೆ ಆ್ಯಂಬುಲೆನ್ಸ್ ಸೇವೆ, ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಉಚಿತ ವ್ಯವಸ್ಥೆಯನ್ನು ಕೆಲವರಿಗೆ ಒದಗಿಸಿದ್ದಾರೆ. ಇಂತಹ ಅನೇಕ ಕರೆಗಳೂ ಅವರಿಗೆ ಬರುತ್ತಿದ್ದು, ಎಲ್ಲದ್ದಕ್ಕೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕಾರ್ಪೊರೇಟರ್ ಗಣೇಶ್ ಅವರ ಮಾನವತೆಯ ಸೇವಾ ಕೈಂಕರ್ಯ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.

Kshetra Samachara

Kshetra Samachara

6 days ago

Cinque Terre

4.39 K

Cinque Terre

3

 • meghaprinters megha
  meghaprinters megha

  super guru

 • sharath kumar s
  sharath kumar s

  well anna go head

 • Rajesh
  Rajesh

  namma ganeshanna... inthaha nooraru olleya kelasa madida obba good human being..gob bless you anna.. 🙏