ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಬಡವರ ಪಾಲಿಗೆ ಪ್ರಜ್ವಲಿಸುವ ಜ್ಯೋತಿಯಾದ ಸ್ಟ್ಯಾನಿ ಪಿಂಟೊ ಕಟೀಲು

ಮುಲ್ಕಿ: ಕಳೆದ ಕೊರೋನಾ ದಿನಗಳಿಂದ ಮುಲ್ಕಿ, ಕಿನ್ನಿಗೋಳಿ, ಕಟೀಲು, ಬಜಪೆ ಜನರ ಕಷ್ಟಗಳಿಗೆ sada ಸದಾ ಸ್ಪಂದಿಸುವ ವ್ಯಕ್ತಿಯಿದ್ದರೆ ಅದು ಸ್ಟ್ಯಾನಿ ಪಿಂಟೋ ಕಟೀಲು. ಎಂದು ಗ್ರಾಮಸ್ಥರು ಹೆಮ್ಮೆಯಿಂದ ಹೇಳುತ್ತಾರೆ.ಜಾತಿ ಧರ್ಮ ನೋಡದೆ ಯಾರು ಕಷ್ಟದಲ್ಲಿದ್ದಾರೆ ಅಂತವರಿಗೆ ತಕ್ಷಣವೇ ನೆರವಿಗೆ ನಿಲ್ಲುತ್ತಿರುವ ಸ್ಟ್ಯಾನಿ ಪಿಂಟೊ ರವರು ಇತ್ತೀಚೆಗೆ ಮುಲ್ಕಿ ಸಮೀಪದ ಅಂಗರಗುಡ್ಡೆ ಪ್ರದೇಶದ ಸುಂದರಿ ಎಂಬ ತಾಯಿಗೆ ಕಣ್ಣಿನ ಆಪರೇಷನ್ ಆಪರೇಷನ್ ಆದ ನಂತರ ಕೆಲಸಕ್ಕೆ ಹೋಗಲು ಕಷ್ಟಕರವಾಗಿತ್ತು.ದಿನಬಳಕೆಯ ಸಾಮಾನನ್ನು ತರಲು ತಾಯಿಯ ಬಳಿ ಹಣ ಇರಲಿಲ್ಲ.ಆದರೆ ವಿಚಾರವನ್ನು ತಿಳಿದ ಅಂಗರಗುಡ್ಡೆ ಊರಿನ ಯುವಕರ ತಂಡ ತಕ್ಷಣವೇ ಸ್ಟ್ಯಾನಿ ಪಿಂಟೊ ರವರ ಬಳಿ ವಿಷಯವನ್ನು ಪ್ರಸ್ತಾಪಿಸಿದ್ದರು.

ತಕ್ಷಣವೇ ಸ್ಪಂದಿಸಿ ಸ್ಟ್ಯಾನಿ ಪಿಂಟೊ ತಾಯಿಗೆ ಸುಮಾರು ಎರಡು ತಿಂಗಳ ದಿನಬಳಕೆಯ ವಸ್ತುಗಳನ್ನು ತನ್ನ ಸ್ವಂತ ದುಡ್ಡಿನಿಂದ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಸುಂದರಿ ಅಮ್ಮನೊಂದಿಗೆ ಮಾತನಾಡಿ ನಿಮ್ಮ ಜೊತೆ ನಾವಿದ್ದೇವೆ,ನಿಮ್ಮ ಕುಟುಂಬದಲ್ಲಿ ನಾವು ಒಬ್ಬರಾಗಿ ಸದಾ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ. ಕಟೀಲ್ ಎಕ್ಕಾರ್ ಲಯನ್ಸ್ ಕ್ಲಬ್ ಅಧ್ಯಕ್ಷರು ಆಗಿರುವ ಸ್ಟ್ಯಾನಿ ಪಿಂಟೊ ರವರು ಕಟೀಲು ಭಾಗದಲ್ಲಿ ತಮ್ಮ ಸ್ವಂತ ಹಣದಿಂದ ಬಡಕುಟುಂಬಕ್ಕೆ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಬಜಪೆ ಸಮೀಪದ ಪೆರ್ಮುದೆಯ ಕ್ಯಾನ್ಸರ್ ಪೀಡಿತ ಮಹಿಳೆಗೆ 25000 ರೂಪಾಯಿಯನ್ನು ನೀಡಿದ್ದಾರೆ. ಉತ್ತಮ ಸಾಮಾಜಿಕ ಕಾರ್ಯಕರ್ತರು ಆಗಿರುವ ಸ್ಟ್ಯಾನಿ ಎಕ್ಕಾರು ಬಡಕುಟುಂಬದ ಮನೆ ರಿಪೇರಿಗೆ 50 ಸಾವಿರವನ್ನು ನೀಡಿದ್ದಾರೆ.ಕಟೀಲು ಬಡಕುಟುಂಬದ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.ಎಕ್ಕಾರು ಅಂಗನವಾಡಿಗೆ ಅಡುಗೆ ಕೋಣೆ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ.

ಸರಕಾರದಿಂದ ಸಿಗುವ ಸವಲತ್ತುಗಳನ್ನು ಬಡಜನರಿಗೆ ತೆಗೆಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಅದೆಷ್ಟು ಮನೆಗಳಿಗೆ ದಿನಬಳಕೆ ವಸ್ತುಗಳನ್ನು ನೀಡಿದ್ದಾರೆ.ಇಂಥ ಹಲವಾರು ಕುಟುಂಬಗಳಿಗೆ ಸಹಾಯಧನ ನೀಡಿದ್ದಾರೆ.ಪ್ರಸ್ತುತ ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ಕಟೀಲು ಇದರ ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

01/03/2021 09:11 am

Cinque Terre

12.21 K

Cinque Terre

1

ಸಂಬಂಧಿತ ಸುದ್ದಿ