ಬಂಟ್ವಾಳ: ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸವಾಗಿರುವ ಅಜ್ಜಿಗೆ ಇಬ್ಬರು ಪೊಲೀಸ್ ಸಿಬ್ಬಂದಿ ಅಕ್ಕಿ ಮತ್ತಿತರ ಪಡಿತರ ಸಾಮಗ್ರಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಪಂಜಿಕಲ್ಲು ಗ್ರಾಮದ ಗುಡಿಸಲಿನಂತಹ ಮನೆಯೊಂದರಲ್ಲಿ ವಯೋ ವೃದ್ಧೆಯೊಬ್ಬರು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ತಮ್ಮ ರೌಂಡ್ಸ್ ವೇಳೆ ಈ ಬಗ್ಗೆ ಮಾಹಿತಿ ಪಡೆದಿದ್ದ ಹೊಯ್ಸಳ ಗಸ್ತು ದಳದ ಸಿಬ್ಬಂದಿ ವಿಜಯ್ ಹಾಗೂ ವಿಶ್ವನಾಥ್ ಎಂಬವರು ಶುಕ್ರವಾರ ಅಜ್ಜಿಯ ಮನೆಗೆ ತೆರಳಿ ಪಡಿತರ ಆಹಾರ ವಸ್ತು ನೀಡಿದ್ದಾರೆ. ಈ ಸಮಾಜಮುಖಿ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Kshetra Samachara
27/02/2021 12:24 pm