ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕರಾವಳಿ ಕಾಲೇಜಿನಲ್ಲಿ 'ಯುವ ಹವಾ ಕಲರವ' ; ರ್ಯಾಂಪ್ ನಲ್ಲಿ ವಿದ್ಯಾರ್ಥಿಗಳ ಮಿಂಚು

ಮಂಗಳೂರು: ನಗರದ ಕರಾವಳಿ ಕಾಲೇಜಿನಲ್ಲಿ ಸಂಸ್ಥಾಪಕರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನಡೆದ 'ಕೈಜನ್ -21' ಮನರಂಜನೆ ಸ್ಪರ್ಧೆ ಗಮನ ಸೆಳೆಯಿತು.

ಕರಾವಳಿ ಗ್ರೂಪ್ ಆಫ್ ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ನಾನಾ ಮನರಂಜನೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಫ್ಯಾಷನ್ ಶೋ ರಂಜಿಸಿತು. ಕೋವಿಡ್​ ವಿರಾಮದ ಬಳಿಕ ಪುನಾರಂಭವಾದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆ ನೀಡುವ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಈ ನಡುವೆ ವಿದ್ಯಾರ್ಥಿಗಳಿಗೆ ಮನರಂಜನೆ ಒದಗಿಸಬೇಕೆಂಬ ನಿಟ್ಟಿನಲ್ಲಿ ವಿವಿಧ ಸ್ಪರ್ಧಾವಳಿ ಆಯೋಜಿಸಲಾಗಿತ್ತು. ಒಂದು ವರ್ಷದ ಬಳಿಕ ಕಾಲೇಜು ಕ್ಯಾಂಪಸ್​ನಲ್ಲಿ ನಡೆದ ಈ ವಿನೋದಾವಳಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಹು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು.

ನಾನಾ ವಿಭಾಗಗಳ ವಿದ್ಯಾರ್ಥಿಗಳು ಫ್ಯಾಷನ್ ಶೋ ನಲ್ಲಿ ಆಕರ್ಷಕ ಸಾಂಪ್ರದಾಯಿಕ ಹಾಗೂ ಮಾಡರ್ನ್ ಉಡುಗೆ ಧರಿಸಿ, ಕ್ಯಾಟ್ ವಾಕ್ ನಡೆಸಿ ಸಖತ್ ಮಿಂಚಿದರು. ಜತೆಗೆ ವಿವಿಧ ನೃತ್ಯ, ಡೊಳ್ಳು ಕುಣಿತ ಮೊದಲಾದ ಮನರಂಜನೆ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದು, ಖುಷಿ ನೀಡಿತು.

Edited By : Manjunath H D
Kshetra Samachara

Kshetra Samachara

26/02/2021 10:59 am

Cinque Terre

22.44 K

Cinque Terre

1

ಸಂಬಂಧಿತ ಸುದ್ದಿ