ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಣ, ಚಿನ್ನಾಭರಣವಿದ್ದ ಬ್ಯಾಗ್ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ರೈಲ್ವೆ ಟಿ.ಟಿ.; ಗೌರವ ಸಲ್ಲಿಕೆ

ಮಂಗಳೂರು: ರೈಲಿನಲ್ಲಿ ಕಳೆದುಕೊಂಡಿರುವ ನಗದು ಮತ್ತು ಚಿನ್ನಾಭರಣ ಹೊಂದಿರುವ ಬ್ಯಾಗ್ ನ್ನು ಪ್ರಯಾಣಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಟಿ.ಟಿ. ಇನ್ಸ್‌ಪೆಕ್ಟರ್ ಗೆ ಪಾಲಕ್ಕಾಡ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತ್ರಿಲೋಕ್ ಕೊಠಾರಿಯವರು ಇಂದು ಪ್ರಮಾಣಪತ್ರ ಮತ್ತು ನಗದು ಪ್ರಶಸ್ತಿ ನೀಡಿ ಗೌರವಿಸಿದರು.

ಫೆ.11ರಂದು ರೈಲು ಸಂಖ್ಯೆ 06629 ತಿರುವನಂತಪುರಂ - ಮಂಗಳೂರು ಸೆಂಟ್ರಲ್ ಸ್ಪೆಷಲ್ ಎಕ್ಸ್‌ಪ್ರೆಸ್ (ಮಲಬಾರ್ ಸ್ಪೆಷಲ್) ನಲ್ಲಿ‌ ಟಿ.ಟಿ. ಇನ್ಸ್‌ಪೆಕ್ಟರ್ ಮುರಳೀಧರನ್ ಎಂ. ಕರ್ತವ್ಯದಲ್ಲಿದ್ದಾಗ ಪ್ರಯಾಣಿಕರೋರ್ವರು ನಗದು ಮತ್ತು ಚಿನ್ನಾಭರಣಗಳ ಬ್ಯಾಗ್ ಕಳೆದುಕೊಂಡಿದ್ದರು. ಬಳಿಕ ಅವರು ಬ್ಯಾಗ್ ಸಂಬಂಧಪಟ್ಟ ವಾರೀಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರು.

ಈ ಹಿನ್ನೆಲೆಯಲ್ಲಿ ಇಂದು ನಡೆದ ಸಾಪ್ತಾಹಿಕ ವಿಭಾಗೀಯ ಸುರಕ್ಷತಾ ಸಭೆಯಲ್ಲಿ ಪಾಲಕ್ಕಾಡ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತ್ರಿಲೋಕ್ ಕೊಠಾರಿಯವರು ಮುರಳೀಧರನ್ ಎಂ. ಅವರಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದರು.

ಈ ಸಂದರ್ಭ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ರಘುರಾಮನ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಿ.ಟಿ. ಶಾಕೀರ್ ಹುಸೈನ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜೆರಿನ್ ಜಿ. ಆನಂದ್ ಮತ್ತು ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ಸಿ.ಮುರಳೀಧರನ್ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

15/02/2021 09:49 pm

Cinque Terre

21.78 K

Cinque Terre

0

ಸಂಬಂಧಿತ ಸುದ್ದಿ