ಉಡುಪಿ: ಹಳ್ಳಿಯಲ್ಲಿ ಶಿಕ್ಷಣ ಪಡೆದು ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಕಾನೂನು ಪದವೀಧರರಾಗಿ ಹಲವು ಅಧಿಕೃತ ಲಾ ಜರ್ನಲ್ ಗಳಲ್ಲಿ ಕಾನೂನು ವಿಷಯಗಳ ಲೇಖನಗಳನ್ನು ಪ್ರಕಟಿಸಿರುವ ಹಾಗೂ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿರುವ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ ಪ್ರಕಾಶ್ ಕಣಿವೆ ಅವರಿಗೆ ಈ ವರ್ಷದ ಪ್ರದೀಪ ಪುರಸ್ಕಾರ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರದೀಪ ಪುರಸ್ಕಾರ ಪ್ರದಾನದ ಸಭಾ ಕಾರ್ಯಕ್ರಮವನ್ನು ಮಾಜಿ ಸಭಾಪತಿ ರಮೇಶ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಡಾ. ಪ್ರಕಾಶ್ ಕಣಿವೆ ಅವರ ಪ್ರತಿಭಾವಂತ ಶಿಷ್ಯಸಂಪತ್ತು ವಿಶಾಲವಾಗಿದೆ. ಇವರ ವಿದ್ಯಾರ್ಥಿಗಳು ಕರ್ನಾಟಕ, ಕೇರಳ ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿದ್ದು, ನ್ಯಾಯಾಂಗ ವ್ಯವಸ್ಥೆಗೆ ಅನುಪಮ ಸೇವೆ ಸಲ್ಲಿಸಿದ್ದಾರೆ.
ಇವರ ವಿದ್ಯಾರ್ಥಿಗಳಾಗಿದ್ದವರೂ ಹಲವು ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಶಿಷ್ಯರು ಸೇರಿ ಪ್ರದೀಪ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನ್ಯಾಯಾಂಗ ಸಹಿತ ಬೇರೆ ಬೇರೆ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
Kshetra Samachara
15/02/2021 11:34 am