ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಲ್ಸಂಕದಲ್ಲಿ ಟ್ರಾಫಿಕ್ ಜಾಮ್ ; ಕಾರಣ ಏನು ಗೊತ್ತೆ?

ಉಡುಪಿ: ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಇಂದು ಏಕಾಏಕಿ ಟ್ರಾಫಿಕ್ ಜಾಮ್ ಆಯ್ತು. ಜಂಕ್ಷನ್ನಲ್ಲಿ ಮೂರು ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಇದ್ದರೂ ಜಾಮ್ ಕ್ಲಿಯರ್ ಮಾಡಲು ಸಾಧ್ಯವಾಗಲೇ ಇಲ್ಲ! ಕಾರಣವೇನೆಂದರೆ ಕಲ್ಸಂಕ ಜಂಕ್ಷನ್ ಗೆ ನಾಗರಹಾವು ಆಗಮನವಾಗಿತ್ತು!.

ಅಂಬಾಗಿಲು ರಸ್ತೆ ಕಡೆಯಿಂದ ಶ್ರೀ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಹೋಗುವ ಕಡೆ ನಾಗರಹಾವು ನಿಧಾನಕ್ಕೆ ಚಲಿಸುತ್ತಿತ್ತು. ಸಿಮೆಂಟ್ ರಸ್ತೆಯಾದ್ದರಿಂದ ವೇಗವಾಗಿ ರಸ್ತೆ ದಾಟಲು ನಾಗರ ಹಾವಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಸ್ಥಳೀಯರು, ವಾಹನ ಸವಾರರು , ಪೊಲೀಸರು ರಸ್ತೆ ದಾಟಲು ಅವಕಾಶ ಮಾಡಿಕೊಟ್ಟರು‌.

ಯಾವುದೇ ವಾಹನಗಳು ಅಡ್ಡ ಚಲಿಸದಂತೆ ನಾಗರಹಾವಿಗೆ ತಬ್ಬಿಬ್ಬಾಗದಂತೆ ನೋಡಿಕೊಂಡರು. ಪೊಲೀಸರು ದಾರಿಹೋಕರನ್ನೂ ಸ್ವಲ್ಪ ಹೊತ್ತು ತಡೆದು, ನಾಗರಹಾವನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದರು.

Edited By : Manjunath H D
Kshetra Samachara

Kshetra Samachara

11/02/2021 09:53 pm

Cinque Terre

20.72 K

Cinque Terre

1

ಸಂಬಂಧಿತ ಸುದ್ದಿ