ಉಡುಪಿ : ಭಾರತೀಯ ಸೇನೆಯಿಂದ ನಿವೃತ್ತಿಗೊಂಡ ಯೋಧರಿರ್ವರನ್ನು ಮೆರವಣಿಗೆಯ ಮೂಲಕ ಊರಿಗೆ ಸ್ವಾಗತಿಸುವ ಕಾರ್ಯಕ್ರಮ ಸಾಲಿಗ್ರಾಮದಲ್ಲಿ ನಡೆಯಿತು.
ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಸಮೀಪದ ಕಾರ್ಕಡ ನಿವಾಸಿಗಳಾದ ಶರತ್‌ಕುಮಾರ್ ಹಾಗೂ ಎಸ್.ಎನ್. ಸತೀಶ ಭಾರತೀಯ ಸೇನೆಯಲ್ಲಿ ತಮ್ಮ ಸೇವಾ ಅವಧಿ ಪೂರೈಸಿ ಊರಿಗೆ ಮರಳಿದ್ದರು.
ಸಾಸ್ತಾನ ಟೋಲ್‌ಗೇಟ್ ಸಮೀಪ ಇವರನ್ನು ಸ್ವಾಗತಿಸಿದ ಸ್ಥಳೀಯರು, ತೆರೆದ ವಾಹನದಲ್ಲಿ ಹಾರ ತುರಾಯಿ ಮೆರವಣಿಗೆಯ ಮೂಲಕ ಊರಿಗೆ ಸ್ವಾಗತಿಸಿದರು. ಅಲ್ಲದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳೆಯರು ಆರತಿ ಬೆಳಗಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
Kshetra Samachara
02/02/2021 07:17 pm