ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗೂಡಂಗಡಿ ತೆರವು; ಗುಂಡಿಯಲ್ಲೇ ಮಲಗಿ ಯುವತಿಯ ದಿಟ್ಟ ಹೋರಾಟ

ಉಡುಪಿ: ಉದ್ಯಾವರದ ವನಿತಾ ಸ್ವಾಭಿಮಾನಿ ಯುವತಿ. ಅವರು ಉಡುಪಿಯ ಮೆಸ್ಕಾಂ ಕಚೇರಿ ಮುಂಭಾಗ, ನಗರಸಭೆ ಸ್ಥಳದಲ್ಲಿ ಚಿಪ್ಪುಸುಣ್ಣದ ಗೂಡಂಗಡಿ ಇಟ್ಟುಕೊಂಡು ಹಲವು ವರ್ಷಗಳಿಂದ ಬದುಕು ಸಾಗಿಸಿಕೊಂಡಿದ್ದರು. ಖಾಸಗಿಯವರು ಅವರಿಗೆ ಯಾವುದೇ ಮುನ್ಸೂಚನೆ ನೀಡದೆ, ಕಂಪೌಂಡ್ ಗೋಡೆ ಕಟ್ಟುವ ನೆಪದಲ್ಲಿ ಅಮಾನವೀಯವಾಗಿ ಅಂಗಡಿ ತೆರವುಗೊಳಿಸಿದರು.

ಈ ಬಗ್ಗೆ ರಾತ್ರಿ ವೇಳೆ ವನಿತಾಗೆ ವಿಷಯ ತಿಳಿದಿದೆ. ತಕ್ಷಣ ಅವರು ಮನೆಯಿಂದ ಸ್ಥಳಕ್ಕೆ ಆಗಮಿಸಿದಾಗ ಪರಿಸ್ಥಿತಿ ಕಂಡು ದಿಗ್ಭ್ರಮೆಗೆ ಒಳಗಾಗಿದ್ದಾರೆ. ಖಾಸಗಿಯವರ ದೌರ್ಜನ್ಯ ಕಂಡು ಸಾರ್ವಜನಿಕ ವಲಯದಲ್ಲಿಯೂ ಆಕ್ರೋಶ ವ್ಯಕ್ತವಾಯಿತು. ಈ ಸಂದರ್ಭ ನೊಂದ ಯುವತಿಗೆ ಸಾರ್ವಜನಿಕರು ಬೆಂಬಲ ಸೂಚಿಸಿದರು.

ಅಡಿಪಾಯ ಹಾಕಲು ತೋಡಿರುವ ಗುಂಡಿಯಲ್ಲಿ ವನಿತಾ ಮಲಗಿ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದಾರೆ. ಕೊನೆಗೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ವನಿತಾ ಅವರ ದಿಟ್ಟ, ನ್ಯಾಯಪರ ಹೋರಾಟಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Edited By : Manjunath H D
Kshetra Samachara

Kshetra Samachara

12/01/2021 05:52 pm

Cinque Terre

16.48 K

Cinque Terre

3

ಸಂಬಂಧಿತ ಸುದ್ದಿ