ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಒಂದೇ ಮನೆಯ ನಾಲ್ವರಿಗೆ ವಿಚಿತ್ರ ಕಾಯಿಲೆ: ಬೇಕಿದೆ ನೆರವಿನ ಹಸ್ತ

ಕಾರ್ಕಳ: ಇದು ಎಂಥ ಕಲ್ಲು ಹೃದಯದವರನ್ನೂ ಕರಗಿಸುವ ಕಥೆ.ಒಂದೇ ಮನೆಯಲ್ಲಿ ಸೊಂಟದ ಸ್ವಾಧೀನ ಇಲ್ಲದ ನಾಲ್ವರು ಅಸಹಾಯಕ ವ್ಯಥೆ!

ಒಂದೇ ಮನೆಯಲ್ಲಿ ನಾಲ್ವರು ವಿಚಿತ್ರ ವ್ಯಾಧಿಯಿಂದ ಬಳಲುತ್ತಿದ್ದು, ಕಳೆದ ಐದು ವರ್ಷಗಳಿಂದ ಹಾಸಿಗೆಯಲ್ಲೇ ದಿನ ಕಳೆಯುತ್ತಿರುವ ಕರುಣಾಜನಕ ಘಟನೆಯು ಕಾರ್ಕಳದ ಅತ್ತೂರು ಗ್ರಾಮದಲ್ಲಿ ಕಂಡುಬಂದಿದೆ. ಇವರು ನಾಲ್ವರು ಪದ್ಮಶಾಲಿ ಸಮಾಜದ ಪದವು ತೋಟದಮನೆಯ ನಿವಾಸಿಗಳು.

ಗುಲಾಬಿ ಶೆಟ್ಟಿಗಾರ್ತಿ (73 ), ಇವರ ಮಕ್ಕಳಾದ ಯಶೋಧಾ ಶೆಟ್ಟಿಗಾರ್ (37) ಬಾಲಕೃಷ್ಣ ಶೆಟ್ಟಿಗಾರ್ (39) ಮತ್ತು ಗೀತಾ ಶೆಟ್ಟಿಗಾರ್ (32) ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಾಲ್ವರಿಗೂ ಸೊಂಟ, ಕಾಲಿನ ಸ್ವಾದೀನ ಇಲ್ಲದೆ ನಡೆಯಲಾಗದ ಚಿಂತಾಜನಕ ಪರಿಸ್ಥಿತಿಯಲ್ಲಿ ದಿನ ಕಳೆಯತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ನಾಲ್ವರು ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂದರೆ ನೀವು ನಂಬಲೇಬೇಕು.

ಈ ನತದೃಷ್ಟ ಕುಟುಂಬದವರು ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ ಇವರಿಗೆ ಬಾಧಿಸಿರುವ ವ್ಯಾಧಿಯು ಗುಣಕಾಣದೆ ಕಂಗಲಾಗಿದ್ದಾರೆ. ಸರಕಾರದಿಂದ ಬರುವ ಪಿಂಚಣಿ 1500 ರೂಪಾಯಿ, ಅನ್ನಭಾಗ್ಯದ ಪಡಿತರ, ಹಾಗೂ ಊರ ಜನರಲ್ಲಿ ಅಂಗಲಾಚಿ ಪಡೆದಿರುವ ನೆರವಿನಿಂದ ಇವರು ದಿನ ದೂಡುವಂತಾಗಿದೆ.

ದುಡಿಯುವವರು ಹಾಸಿಗೆ ಹಿಡಿದಿರುವುದರಿಂದ ಚಿಕಿತ್ಸೆ , ಔಷೋಧೋಪಚಾರಕ್ಕೂ ಇವರ ಬಳಿ ಹಣ ಇಲ್ಲ.ರಕ್ತದ ಸಮಸ್ಯೆಯಿಂದ ಈ ವ್ಯಾಧಿ ಬಂದಿದ್ದಾಗಿ ವ್ಯೆದ್ಯರು ಹೇಳುತ್ತಾರೆ.

ವಿಷಯ ತಿಳಿದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಕೆ.ಬಾಲಗಂಗಾಧರ ರಾವ್ ಅವರು ರೋಗಿಗಳ ಮನೆಗೆ ಭೇಟಿನೀಡಿದ್ದಾರೆ. ದೊಡ್ಡ ಆಸ್ಪತ್ರೆಯಲ್ಲಿ ನಾಲ್ವರನ್ನು ಚಿಕಿತ್ಸೆಗೆ ಅಗತ್ಯವಾಗಿ ಒಳಪಡಿಸಬೇಕಾಗಿದೆ, ದೊಡ್ಡ ಮಟ್ಟದ ಆರ್ಥಿಕ ನೆರವಿನ ಅಗತ್ಯ ಈ ಕುಟುಂಬಕ್ಕಿದೆ. ಸಹೃದಯಿ ದಾನಿಗಳು, ಸಮಾಜದ ಸಂಘ ಸಂಸ್ಥೆಗಳು ಬಡಕುಟುಂಬದ ನೆರವಿಗೆ ಬರಬೇಕೆಂದು, ನಾಗರಿಕ ಸಮಿತಿಯ ಕಾರ್ಯಕರ್ತರು ವಿನಂತಿಸಿಕೊಂಡಿದ್ದಾರೆ.

ಅವರ ಬ್ಯಾಂಕ್ ಖಾತೆ ವಿವರ;

BALAKRISHNA SHETTIGAR

ACOUNT NUMBER

520191032164420

IFSC CODE UBIN0902454

ಸಂಪರ್ಕ ಸಂಖ್ಯೆ:- ಬಾಲಕೃಷ್ಣ ಶೆಟ್ಟಿಗಾರ್ 961149537

Edited By : Manjunath H D
Kshetra Samachara

Kshetra Samachara

08/01/2021 01:47 pm

Cinque Terre

37.94 K

Cinque Terre

2