ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೆರೆ ಸಂತ್ರಸ್ತ 400 ಮಂದಿಗೆ ಶ್ರೀ ಕೃಷ್ಣಮಠ ವತಿಯಿಂದ ಅನ್ನಪ್ರಸಾದ ವಿತರಣೆ

ಉಡುಪಿ: ಶ್ರೀಕೃಷ್ಣಮಠದ ಆಸುಪಾಸಿನ ಸುಮಾರು 80 ಕುಟುಂಬಗಳ 400 ಮಂದಿಗೆ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಆಶಯದಂತೆ ಶ್ರೀಕೃಷ್ಣ ಮಠದಿಂದ ಅನ್ನಪ್ರಸಾದ ವಿತರಿಸಲಾಯಿತು.

ಪ್ರಸಾದ ರೂಪದಲ್ಲಿ ಅನ್ನ ಸಾರು, ಕುಂಬಳಕಾಯಿ ಸಾಂಬಾರು ಮತ್ತು ಪಾಯಸ ವಿತರಿಸಲಾಯಿತು. ಮಠದ ಸುತ್ತಮುತ್ತ ಹಲವೆಡೆ ನೆರೆ ಬಂದಿದ್ದು,ಅನೇಕ ಜನರು ಸಂಕಷ್ಡಕ್ಕೀಡಾಗಿದ್ದರು.

ಈ ಪೈಕಿ ಅನೇಕರು ಕೂಲಿ ಮಾಡುತ್ತಾ ಜೀವನ ನಿರ್ವಹಿಸುತ್ತಿದ್ದಾರೆ. ಹಲವು ಮನೆಗಳು ಈ ಭಾಗದಲ್ಲಿ ನೆರೆ ನೀರಿನಿಂದ ಆವೃತ್ತವಾಗಿದ್ದರಿಂದ ಇಂದು ಬೆಳಿಗ್ಗಿನ ಉಪಾಹಾರವನ್ನೂ ನೀಡಲಾಗಿತ್ತು. ಮಧ್ಯಾಹ್ನ ಸುಮಾರು 400 ಜನರಿಗೆ ಭೋಜನ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶಾಸಕ ಕೆ. ರಘುಪತಿ ಭಟ್ , ನಗರಸಭಾ ಆಯುಕ್ತರು, ಕಂದಾಯ ಸಹಾಯಕ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳು, ನಗರಸಭಾ ಸದಸ್ಯರು ಮತ್ತು ನೇತೃತ್ವ ವಹಿಸಿದ ಸ್ಥಳೀಯರಾದ ಹರೀಶ್ ಬೈಲಕೆರೆ ಮಠದ ವ್ಯವಸ್ಥಾಪಕರು ಮತ್ತು ಶ್ರೀ ಕೃಷ್ಣ ಸೇವಾ ಬಳಗದ ವೈ ಎನ್ ಆರ್ ರಾವ್ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಸಮಾಜದ ಒಳಿತಿಗಾಗಿ ನಿನ್ನೆ ಸಂಜೆ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ರಾತ್ರಿ ಪೂಜೆಯ ನಂತರ ಶ್ರೀಮಠದ ಋತ್ವಿಜರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Edited By :
Kshetra Samachara

Kshetra Samachara

21/09/2020 10:36 pm

Cinque Terre

11.44 K

Cinque Terre

0

ಸಂಬಂಧಿತ ಸುದ್ದಿ