ಕಟಪಾಡಿ: ಗ್ಯಾಂಗ್ರಿನ್ ಕಾಯಿಲೆಗೆ ತುತ್ತಾಗಿ ಕಾಲನ್ನು ಕಳೆದುಕೊಂಡ ವ್ಯಕ್ತಿಗೆ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಸಹಾಯಹಸ್ತ ಚಾಚಿದ್ದಾರೆ.
ಆ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಗೆ ಗೀತಾಂಜಲಿ ಸುವರ್ಣ ಸಹಾಯಧನ ನೀಡಿದ್ದಲ್ಲದೆ, ದಾನಿಗಳ ಮೂಲಕ ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.
ಗ್ಯಾಂಗ್ರಿನ್ ಕಾಯಿಲೆಯಿಂದ ಕಾಲನ್ನೇ ಕಳೆದುಕೊಂಡು ಒದ್ದಾಡುತ್ತಿದ್ದ ಗರಡಿಮಜಲು ನಿವಾಸಿ ಸುಕೇಶ್ ಪೂಜಾರಿಯವರು ದಾನಿಗಳ ನೆರವನ್ನು ಎದುರು ನೋಡುತ್ತಿದ್ದರು. ಈ ವಿಷಯ ತಿಳಿದ ಗೀತಾಂಜಲಿ ಸುವರ್ಣ ಚಿಕಿತ್ಸೆಗಾಗಿ ದಾನಿಗಳಿಂದ ಹಣ ಸಂಗ್ರಹಿಸಿ ಇಂದು ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.
ಗೀತಾಂಜಲಿ ಎಂ. ಸುವರ್ಣ ಅವರ ಮನವಿಗೆ ಸ್ಪಂದಿಸಿದ ಭಾರತೀಯ ಸೇನಾ ನಿವೃತ್ತ ಯೋಧ ಕಮಲಾಕ್ಷ ಬಂಗೇರ, ಸತ್ಯದ ತುಳುವೆರ್ ತಂಡದ ಸಂಚಾಲಕ ಪ್ರವೀಣ್ ಕುರ್ಕಾಲು, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಭಿರಾಜ್ ಸುವರ್ಣ, ನೀರೆ ಗರಡಿ ಮನೆ ಜಗದೀಶ್ ಪೂಜಾರಿ, ರಿತೇಶ್ ಪೂಜಾರಿ, ಸಂತೋಷ್ ಕುಂದರ್, ಬೆಳ್ತಂಗಡಿ ವೀರ ಕೇಸರಿ ತಂಡ ಸದಸ್ಯರು ಕೈ ಜೋಡಿಸಿದ್ದಾರೆ.
Kshetra Samachara
29/09/2020 07:27 pm