ಉಡುಪಿ: ಉಡುಪಿ ಜಿಲ್ಲೆಯಲ್ಲಿ NDRF ತಂಡ ನೆರೆಯಲ್ಲಿ ಸಿಲುಕಿದವರ ರಕ್ಷಣೆಗೆ ಹರಸಾಹಸ ಪಡುತ್ತಿದೆ. ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಈ ತಂಡ ಶಕ್ತಿ ಮೀರಿ ಶ್ರಮಿಸುತ್ತಿದ್ದರೆ, ಇಲ್ಲೊಬ್ಬಳು ಬಾಲಕಿ ತನ್ನ ಮೆಚ್ಚಿನ ಬೆಕ್ಕಿನ ಮರಿಯ ರಕ್ಷಣೆ ಮಾಡಿ ಖುಷಿ ಪಟ್ಟಿದ್ದಾಳೆ.
ಉಡುಪಿಯ ಪೆರಂಪಳ್ಳಿಯ ಪಾಸ್ಕುದ್ರುವಿನಲ್ಲಿ ಇಪ್ಪತ್ತಕ್ಕೂ ಅಧಿಕ ಕುಟುಂಬಗಳು ನೆರೆಯಲ್ಲಿ ಸಿಲುಕಿದ್ದವು. ಸ್ಥಳಕ್ಕೆ ದೌಡಾಯಿಸಿದ NDRF ತಂಡ ತ್ವರಿತ ಕಾರ್ಯಾಚರಣೆಯ ಮೂಲಕ ಎಲ್ಲರನ್ನೂ ರಕ್ಷಿಸಿದರು. ಇದರಲ್ಲಿ ಮಕ್ಕಳು, ವೃದ್ಧರೂ ಸೇರಿದ್ದರು.
ಈ ಬಾಲಕಿಯ ಕೈಯಲ್ಲಿ ರಕ್ಷಿಸಲ್ಪಟ್ಟ ಬೆಕ್ಕಿನ ಮರಿ ಬೆಚ್ಚಗೆ ಮಲಗಿದ್ದು ಕಂಡು ಅಲ್ಲಿದ್ದವರು ಆಕೆಯ ಬೆನ್ನು ತಟ್ಟಿದರು. ತನ್ನ ಜೊತೆಗೆ ತನ್ನ ಮುದ್ದಿನ ಬೆಕ್ಕಿನ ಮರಿಯನ್ನೂ ಕೈಯಲ್ಲಿ ಹಿಡಿದುಕೊಂಡಿದ್ದ ಬಾಲಕಿಯ ಮೊಗದಲ್ಲಿ ಸಂತಸ, ರೋಮಾಂಚನ ಎದ್ದು ಕಾಣುತ್ತಿತ್ತು.
Kshetra Samachara
20/09/2020 07:42 pm