ಉಡುಪಿ: ಪ್ರಸಕ್ತ ಅಧಿವೇಶನದಲ್ಲೇ ಪ್ರಬಲ ಗೋಹತ್ಯೆ ನಿಷೇಧ ಕಾಯಿದೆ ಮಂಡಿಸಿ: ಪೇಜಾವರ ಶ್ರೀಗಳ ಒತ್ತಾಯ

ಉಡುಪಿ: ರಾಜ್ಯದಲ್ಲಿ ಗೋ ಹತ್ಯೆ ಮತ್ತು ಹಿಂಸಾತ್ಮಕ ರೀತಿಯ ಗೋ ಸಾಗಾಟ ನಿರಂತರವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಇರುವ ಗೋ ಹತ್ಯಾ ನಿಷೇಧ ಕಾಯಿದೆ ಅತ್ಯಂತ ದುರ್ಬಲವಾಗಿದ್ದು, ಪ್ರಸ್ತುತ ಅಧಿವೇಶನದಲ್ಲೇ ಪ್ರಬಲ ಗೋಹತ್ಯೆ ಕಾಯಿದೆ ತರಬೇಕು ಎಂದು ಪೇಜಾವರ ಮಠಾಧೀಶರು ಆಗ್ರಹಿಸಿದ್ದಾರೆ.

ಈ ಸಂಬಂಧ ಸರಕಾರಕ್ಕೆ ಮನವಿ ಮಾಡಿರುವ ಶ್ರೀಗಳು, ಗೋ ಸಂತತಿ ನಿರಂತರ ಹತ್ಯೆಯಿಂದಾಗಿ ನಶಿಸುತ್ತಾ ಸಾಗುತ್ತಿದೆ. ಇದು ಗೋ ಪ್ರೇಮಿಗಳಿಗೆ ನೋವು ನೀಡುವ ಸಂಗತಿಯಾಗಿದೆ.

ಪ್ರಸ್ತುತ ಇರುವ ಗೋಹತ್ಯಾ ನಿಷೇಧ ಕಾಯಿದೆ(1964) ದುರ್ಬಲವಾಗಿದೆ. ಹೀಗಾಗಿ ಸರಕಾರಕ್ಕೆ ಗೋ ಪ್ರೇಮಿಗಳ ಪರವಾಗಿ ಈ ಮೂಲಕ ಆಗ್ರಹಿಸುವುದೇನೆಂದರೆ ಗೋ ಹತ್ಯೆ ತಡೆಗಟ್ಟಲು ಪ್ರಬಲ ಕಾಯಿದೆ ರೂಪಿಸಿ ಇದೇ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಪೇಜಾವರ ಶ್ರೀಗಳು ಮನವಿ ಮಾಡಿದ್ದಾರೆ.

Kshetra Samachara

Kshetra Samachara

11 days ago

Cinque Terre

11.41 K

Cinque Terre

1

  • sathya ram
    sathya ram

    we should ban slaughter of cow throughout india...jai shree Gomatha... 🙏