ಸುಬ್ರಹ್ಮಣ್ಯ : ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲವು ತಿಂಗಳ ಕಾಲ ಬಂದ್ ಆಗಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಇತ್ತೀಚೆಗೆ ಓಪನ್ ಆಗಿದ್ದು, ವಿಶೇಷ ಪೂಜೆಗಳ ಜೊತೆಗೆ ನಾನಾ ಸೇವೆಗಳೂ ನಡೆಯುತ್ತಿದೆ.
ಬೇರೆ ಬೇರೆ ಕಡೆಯಿಂದ ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಕುಕ್ಕೆಯಲ್ಲಿ ಇಂದು ಸುಬ್ರಹ್ಮಣ್ಯ ದೇವರ ವಾಹನವೆಂದೇ ಬಿಂಬಿತವಾದ ನವಿಲುಗಳ ಸಂಚಾರ ಭಕ್ತರನ್ನು ಆಕರ್ಷಿಸಿತು.
ಶೇಷ ಕುಟೀರ ವಸತಿ ಗೃಹದ ಎದುರಿನ ರಸ್ತೆಯಲ್ಲಿ ವಾಹನ ಸಂಚಾರದ ನಡುವೆ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದವು ಮಯೂರ. ಹೆಚ್ಚಾಗಿ ನವಿಲು ಮನುಷ್ಯರನ್ನು ಕಂಡರೆ ಹೆದರಿ ಓಡುವುದು ಹೆಚ್ಚು. ಆದರೆ, ಇಲ್ಲಿ ಮಾತ್ರ ಯಾವುದೇ ಭಯವಿಲ್ಲದೆ ನವಿಲು ರಸ್ತೆ ದಾಟುತ್ತಿರುವುದು ವಿಶೇಷವಾಗಿತ್ತು.
Kshetra Samachara
22/09/2020 12:48 pm