ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ತಿಲಕ್ ಕರ ಚಮತ್ಕಾರ; ಅಕ್ಕಿ, ಇದ್ದಿಲಲ್ಲಿ ಅರಳಿದ ಆದಿ ಯೋಗಿ

ಮೂಡುಬಿದಿರೆ: ನೈಲ್ ಆರ್ಟ್ ಮೂಲಕ ವಿಶ್ವ ದಾಖಲೆಯೊಂದಿಗೆ ಗಮನ ಸೆಳೆದ ಯುವ ಕಲಾವಿದ ಮೂಡುಬಿದಿರೆಯ ತಿಲಕ್ ಕುಲಾಲ್ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಮಹಾ ಶಿವನನ್ನು ಅರಳಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

20*20 ಅಡಿ ಚೌಕದಲ್ಲಿ ಬೆಳ್ತಿಗೆ ಅಕ್ಕಿ ಮತ್ತು ಇದ್ದಿಲಿನ ಮಸಿಯನ್ನು ಬಳಸಿ ಎರಡೂವರೆ ಗಂಟೆಗಳ ಅವಧಿಯಲ್ಲಿ

ಮಹಾಶಿವ ದೇವರನ್ನು ತಿಲಕ್ ಮೂಡಿಸಿದರೆ ಸ್ನೇಹಿತರಾದ ರಕ್ಷಿತ್ ಕುಲಾಲ್ ಮತ್ತು ರೋಹಿತ್ ನಾಯ್ಕ್ ನೆರವಾಗಿದ್ದಾರೆ.

ಮಕರ ಸಂಕ್ರಾಂತಿ ಸಂದರ್ಭ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆಯೇ ಬಲಭಾಗದಲ್ಲಿರುವ ಬೃಹತ್ ಸ್ವರೂಪಿ ಪರಶಿವನನ್ನು ಭಕ್ತಾದಿಗಳು ವೀಕ್ಷಿಸಲು ಅವಕಾಶ ಕಲ್ಪಿಸಲಾಯಿತು.

ಎರಡೂವರೆ ಗಂಟೆಗಳ ಅವಧಿಯಲ್ಲಿ ತಿಲಕ್ ತನ್ನ ಸ್ನೇಹಿತರೊಂದಿಗೆ 70 ಕೆಜಿ ಅಕ್ಕಿ ಮತ್ತು 40 ಕೆಜಿ ಯಷ್ಟು ಇದ್ದಿಲು ಬಳಸಿ ತನ್ನ ಬಳಗದ ಕನಸಿನ ಕಲ್ಪನೆ ಸಾಕಾರಗೊಳಿಸಿದ್ದಾರೆ. ಮುಂದೆಯೂ ಇಂತಹ ವಿಶಿಷ್ಟ ಪ್ರಯೋಗಗಳನ್ನು ಮಾಡುವ ಉತ್ಸಾಹದಲ್ಲಿದ್ದಾರೆ.

Edited By : Shivu K
PublicNext

PublicNext

16/01/2022 02:20 pm

Cinque Terre

58.48 K

Cinque Terre

2

ಸಂಬಂಧಿತ ಸುದ್ದಿ