ಕೋಟ: ಕೋಟತಟ್ಟು ಗ್ರಾಮದ ಕೊರಗ ಸಮುದಾಯದ ಮೇಲೆ ಪೋಲಿಸ್ ದೌರ್ಜನ್ಯ ನಡೆದು ವಾರ ಕಳೆದಿದೆ.ಇದೀಗ ತಮಗಾದ ದೌರ್ಜನ್ಯದ ವಿರುದ್ಧ ಕೊರಗ ಸಮುದಾಯದ ಕುಟುಂಬಿಕರು ಕೋಟದ ಅಮೃತೇಶ್ವರಿ ದೇವಿಗೆ ಮೊರೆ ಇಟ್ಟಿದ್ದಾರೆ.
ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಂತ್ರಸ್ಥರು, ನಂತರ ದೇವಳದ ಹೊರಭಾಗದಲ್ಲಿ ಕುಟುಂಬ ಸಹಿತ ತೆಂಗಿನ ಕಾಯಿ ಒಡೆದು ತಮ್ಮ ನೋವಿಗೆ ಕಾರಣಿಕರ್ತರಾದ ಯಾರೇ ಇರಬಹುದು ಅಂತವರನ್ನು ತಾಯಿಯೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿದರು.
ನಾವು ಅನ್ಯಾಯ ಮಾಡಿ ಬದುಕಿದವರಲ್ಲ. ನಮ್ಮ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ನಮ್ಮ ಮೇಲೆ ಏಕಾಏಕಿ ಹಲ್ಲೆ ಮಾಡಿ ಇಡೀ ಕುಟುಂಬ ಭಯದಲ್ಲಿ ಬದುಕುವಂತೆ ಮಾಡಿದ್ದಾರೆ.ನಮ್ಮನ್ನು ಕಾಯುವ ದೇವರ ಮೊರೆಹೋಗಲು ಹಿರಿಯರು ಸೂಚಿಸಿದ್ದಾರೆ .ಯಾರನ್ನಾದರೂ ಕಣ್ಣು ತಪ್ಪಿಸಬಹುದು, ಆದರೆ ದೇವಿಯ ಕಣ್ಣು ತಪ್ಪಿಸಿ ಬದುಕಲು ಸಾಧ್ಯವಿಲ್ಲ.ನೊಂದ ನಮ್ಮ ಸಮಯದಾಯಕ್ಕೆ ಆ ತಾಯಿ ನ್ಯಾಯ ಒದಗಿಸುತ್ತಾಳೆ ನಂಬಿಕೆ ಇಟ್ಟಿದ್ದೇವೆ. ಇಂದಿನಿಂದಲೇ ನೆಮ್ಮದಿಯ ಜೀವನ ಸಾಗಿಸಲು ತಾಯಿ ಅನುಗ್ರಹಿಸಿದ್ದಾಳೆ ಎಂದು ಕೊರಗ ಸಮಾಜದ ಮುಖಂಡ ಗಣೇಶ್ ಬಾರ್ಕೂರು ಹೇಳಿದರು. ದೇವಳದ ಭೇಟಿಯ ನೇತೃತ್ವವನ್ನು ಸಾಮಾಜಿಕ ಕಾರ್ಯಕರ್ತ ಕೋಟ ದಿನೇಶ ಗಾಣಿಗ ವಹಿಸಿದ್ದರು.
ಜೀವನ್ ಮಿತ್ರ ಆಂಬ್ಯುಲೆನ್ಸ್ ಮಾಲಿಕ ನಾಗರಾಜ್ ಪುತ್ರನ್,ನಾಗೇಂದ್ರ ಪುತ್ರನ್,ಕೃಷ್ಣ ಪುತ್ರನ್,ರಾಮ ತೋಳಾರ್,ಭರತ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/01/2022 04:45 pm