ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಗುವಿಗಾಗಿ ದೇವರ ಮೊರೆ; ಭಕ್ತನಿಂದ ಅರೆಕಟ್ಟು ಕಾಳ ಚಿಕ್ಕುಗೆ ಸ್ವಾಗತ ಗೋಪುರ

ಉಡುಪಿ: ಮಕ್ಕಳಿಗಾಗಿ ಅನೇಕರು ಹಲವು ಹರಕೆಯನ್ನು ದೇವರಿಗೆ ನೀಡುವುದು ಸಹಜ. ಆದರೆ, ಕರಾವಳಿ ಭಾಗದಲ್ಲಿ ದೈವಗಳನ್ನೂ ಆರಾಧಿಸಿಕೊಂಡು ಬಂದಿರುವ ಕುಟುಂಬಗಳೇ ಹೆಚ್ಚು. ಉಡುಪಿ ಜಿಲ್ಲೆಯ ಹತ್ತೂರು ಅರೆಕಟ್ಟು ಕಾಳ ಚಿಕ್ಕು ದೈವಸ್ಥಾನಕ್ಕೆ ಭಕ್ತ ದಂಪತಿಯು 6 ಲಕ್ಷ ವೆಚ್ಚದಲ್ಲಿ ದೈವಕ್ಕೆ ಹರಕೆ ರೂಪದಲ್ಲಿ ಸ್ವಾಗತ ಗೋಪುರ ನಿರ್ಮಾಣ ಮಾಡಿ ತಮ್ಮ ಹರಕೆಯನ್ನು ಸಲ್ಲಿಸಿದ್ದಾರೆ.

ಪ್ರತಿಮಾ- ರಂಜಿತ್ ಕುಲಾಲ್ ದಂಪತಿಯು ದೈವಕ್ಕೆ ಸ್ವಾಗತ ಗೋಪುರ ನಿರ್ಮಾಣ ಮಾಡಿದವರು. ಒಬ್ಬ ಸಾಮಾನ್ಯ ಉದ್ಯೋಗ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬವು ಕಾರಣಿಕ ದೈವದ ಶಕ್ತಿಗೆ ಮಣಿದು, ಇದೀಗ ಸ್ವಾಗತ ಗೋಪುರವನ್ನು ನಿರ್ಮಾಣ ಮಾಡಿದ್ದಾರೆ. ಈ ಸ್ವಾಗತ ಗೋಪುರವನ್ನು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಿದರು.

ಸ್ವಾಗತ ಗೋಪುರ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಜಾತಿ ಒಂದೇ. ನಾವು ಸಾಮರಸ್ಯದಿಂದ ಬದುಕನ್ನು ಕಟ್ಟಿಕೊಳ್ಳಬೇಕು, ಇಲ್ಲಿ ಅಹಂಕಾರ ಮೆರೆದವರು ನೆಲಕಚ್ಚಿ ಹೋಗುತ್ತಾರೆ. ಯಾವತ್ತೂ ದುರಂಕಾರದ ಹಾದಿಯಲ್ಲಿ ಯಾರೂ ನಡೆಯಬಾರದು. ಹೆಣ್ಣುಮಕ್ಕಳಿಗೆ ಗೌರವ ಕೊಡಬೇಕು, ಈ ಸ್ಥಳದಲ್ಲಿ ಹೆಣ್ಣುಮಕ್ಕಳ ಕಣ್ಣೀರು ಹಾಕಿಸಬಾರದು. ದೇವರ ಮೇಲೆ ಆಣೆ ಪ್ರಮಾಣಗಳನ್ನು ಯಾರೂ ಮಾಡಬಾರದು, ಅವರು ಮಾಡಿದ ಪಾಪ ಕರ್ಮಗಳಿಗೆ ಅವರು ಇಲ್ಲಿ ಉತ್ತರಿಸಲೇಬೇಕು ಎಂದು ಸ್ವಾಮೀಜಿ ಹಿತವಚನ ಹೇಳಿದರು.

ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರನ್ನು ಆತ್ಮೀಯವಾಗಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡು ಪಾದ ಪೂಜೆ ಸಲ್ಲಿಸಲಾಯಿತು.

- ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ

Edited By : Manjunath H D
Kshetra Samachara

Kshetra Samachara

06/02/2021 10:38 pm

Cinque Terre

25.14 K

Cinque Terre

2

ಸಂಬಂಧಿತ ಸುದ್ದಿ