ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಗೋಮಯ ಜ್ಯೋತಿ" ಸಾವಯವ ದೀಪ ಯೋಜನೆ

ಉಡುಪಿ: ಈ ಬಾರಿಯ ದೀಪಾವಳಿಯ ಜ್ಯೋತಿ ಕೇವಲ ಮನೆ ಮಾತ್ರವಲ್ಲ, ರಾಷ್ಟ್ರದ ಸ್ವದೇಶಿ ಕಲ್ಪನೆಯನ್ನೂ ಬೆಳಗಲಿ ಎಂಬ ಉದ್ದೇಶದಿಂದ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಈ ಬಾರಿ ಗೋಮಯ ಜ್ಯೋತಿ ಎಂಬ ಸಾವಯವ ದೀಪದ ಯೋಜನೆ ಜಾರಿಗೆ ತಂದಿದೆ. ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ ಆರೂರು ಮತ್ತು ಜಾರ್ಖಂಡಿನ ಟೀಮ್ ಗೌಮಾ ಅವರಲ್ಲಿ ತಯಾರಿಸಿದ ಶೇ.75 ಗೋಮಯ, ಶೇ. 25 ಮಣ್ಣು ಮಿಶ್ರಿತ ದೀಪ ತಯಾರಿಸಲಾಗುತ್ತಿದೆ.

ಈ ದೀಪದ ವಿಶೇಷತೆ ಏನೆಂದರೆ ದೀಪವು ನೀರಿನಲ್ಲಿ ತೇಲುತ್ತದೆ! ನಂತರ ಇದನ್ನು ಗಿಡ-ಮರಗಳಿಗೆ ಗೊಬ್ಬರವಾಗಿಯೂ ಬಳಸಬಹುದು. ಈ ದೀಪ ವ್ಯವಹಾರದ ದೃಷ್ಟಿಯಿಂದ ಮಾಡುತ್ತಿಲ್ಲ. ಬದಲಾಗಿ ಗೋಸೇವಾ ದೃಷ್ಟಿ, ಸ್ವದೇಶಿ ಕಲ್ಪನೆ ಅಂಗವಾಗಿ ಪರಿಸರ ಪೂರಕವಾಗಿ ನಡೆಸಲಾಗುತ್ತಿದೆ. ಒಂದು ಪ್ಯಾಕೆಟ್ ಬೆಲೆ 50 ರೂ. ಮಾತ್ರ. ಇದರಲ್ಲಿ 12 ದೀಪ ಇರಲಿದೆ. ಈ ದೀಪವನ್ನು ಆದಷ್ಟೂ ಉಪಯೋಗಿಸಿ, ಪರಿಸರ ಮಾಲಿನ್ಯ ತಡೆಯುವುದರ ಜೊತೆಗೆ ಸ್ವದೇಶಿ ಪರಿಕಲ್ಪನೆಗೆ ಪ್ರೋತ್ಸಾಹಿಸಿ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

12/11/2020 10:58 am

Cinque Terre

15.64 K

Cinque Terre

4

ಸಂಬಂಧಿತ ಸುದ್ದಿ