ಉಡುಪಿ: ಒಂದೂವರೆ ವರ್ಷಗಳ ಹಿಂದೆ ಉಡುಪಿಯ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಧಪನ ಮಾಡಲಾಗಿದ್ದ ಪಂಜಾಬ್ ಮೂಲದ ವ್ಯಕ್ತಿಯ ಮೃತದೇಹವನ್ನು ಪಂಜಾಬ್ ಪೊಲೀಸರು ಹೊರತೆಗೆಸಿದ್ದಾರೆ. ಪಂಜಾಬ್ ರಾಜ್ಯದಲ್ಲಿ ನಾಪತ್ತೆಯಾದ ಈ ವ್ಯಕ್ತಿ ಒಂದೂವರೆ ವರ್ಷಗಳ ಹಿಂದೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದರು. ಮೃತರ ವಾರಸುದಾರರು ಸಂಪರ್ಕಿಸದ ಕಾರಣಕ್ಕಾಗಿ ಅಜ್ಜರಕಾಡು ಶವಾಗಾರದಲ್ಲಿದ್ದ ಈ ಮೃತದೇಹವನ್ನು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ ದಫನ್ ಮಾಡಲಾಗಿತ್ತು.
ಇದೀಗ ಹೆಚ್ಚಿನ ತನಿಖೆಗಾಗಿ ಉಡುಪಿಗೆ ಆಗಮಿಸಿರುವ ಪಂಜಾಬ್ ಪೊಲೀಸರು, ಉಡುಪಿ ಮತ್ತು ಮಲ್ಪೆ ಪೊಲೀಸರು ಹಾಗೂ ಉಡುಪಿ ತಹಶೀಲ್ದಾರ್ ಮತ್ತಿತರರ ಸಮ್ಮುಖ ಶವವನ್ನು ಹೊರ ತೆಗೆಸಿದರು. ಈ ಶವದ ಮರಣೋತ್ತರ ಪರೀಕ್ಷೆ ನಡೆಸುವುದರ ಜೊತೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
Kshetra Samachara
14/05/2022 06:36 pm