ಉಡುಪಿಯ ರೋಹನ್ ಮತ್ತತರರು ಕಳಿಸಿದ ಮನ ಮಿಡಿಯುವ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯ!
ಉಡುಪಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಉಡುಪಿಯ ರೋಹನ್ ಮತ್ತು ಏಳು ಮಂದಿ ವಿದ್ಯಾರ್ಥಿಗಳು ನಮ್ಮನ್ನು ರಕ್ಷಣೆ ಮಾಡಿ ,ಇಲ್ಲಿ ನಮ್ಮ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಂಗಲಾಚುವ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.
",ನಾವು ಉಕ್ರೇನಿನ ಕಾರ್ಕೀವ್ ಸಿಟಿಯಲ್ಲಿ ಸಿಲುಕಿದ್ದೇವೆ.ಕಳೆದ ಎರಡು ದಿನಗಳಿಂದ ಹೊಟ್ಟೆಗೆ ಆಹಾರ ಇಲ್ಲದೆ ನಾವು ಬಳಲಿದ್ದೇವೆ.
ಬ್ರೆಡ್ ಮತ್ತು ಚಾಕಲೇಟ್ ತಿಂದು ನಾವು ದಿನ ಕಳೆಯುತ್ತಿದ್ದೇವೆ. ನಾವು ಇರುವ ಪ್ರದೇಶದಲ್ಲಿ ಸರಿಯಾಗಿ ನೀರು ಮತ್ತು ಬೆಳಕು ಗಾಳಿಯೂ ಇಲ್ಲ ಎಂದು ಯುವಕರು ಹೇಳಿಕೊಂಡಿದ್ದಾರೆ.
ಮರು ಶುದ್ಧೀಕರಿಸಿದ ನಳ್ಳಿ ನೀರನ್ನೇ ಸದ್ತ ಕುಡಿಯುತ್ತಿದ್ದೇವೆ. ಭಾರತದ ರಾಯಭಾರಿ ಕಚೇರಿ ಮತ್ತು ಕೇಂದ್ರ ಸರಕಾರ ನಮ್ಮನ್ನು ರಕ್ಷಣೆ ಮಾಡಬೇಕು. ಕೂಡಲೇ ರಕ್ಷಣೆ ಮಾಡದಿದ್ದರೆ ಇಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.ಕಾಲೇಜಿನಲ್ಲಿದ್ದಾಗ ಅಲರಾಮ್ ಸದ್ದು ನಮ್ಮನ್ನು ಎಬ್ಬಿಸುತ್ತಿತ್ತು.ಈಗ ಸೆಲ್ ಮತ್ತು ಬಾಂಬ್ ದಾಳಿ ಸದ್ದಿನಿಂದ ನಾವು ನಿದ್ದೆ ಕಳೆದುಕೊಂಡಿದ್ದೇವೆ. ನಮ್ಮ ಕಟ್ಟಡ ಬಾಂಬ್ ದಾಳಿಯ ಕಂಪನಕ್ಕೆ ಕುಸಿದು ಬಿಡುವುದೋ ಎಂದು ಭಯವಾಗುತ್ತಿದೆ ಇತ್ಯಾದಿಯಾಗಿ ಮಾತನಾಡಿದ್ದಾರೆ.
ಅವರು ಕಳಿಸಿದ ಸಂಪೂರ್ಣ ವಿಡಿಯೋ ಇಲ್ಲಿದೆ ,ನೋಡಿ.
PublicNext
28/02/2022 06:25 pm