ಮಂಗಳೂರು: ನಗರದ ಬಂಗ್ರಕೂಳೂರಿನಲ್ಲಿ ಸರಕಾರದ ಅಧಕೃತ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಪ್ರಧಾನಿ ಮೋದಿಯವರ ಕಾರಿನತ್ತ ಓಡಿದ ಅಸಾಮಿಯನ್ನು ಪೊಲೀಸರು ಎಳೆದು ಹಾಕಿರುವ ಪ್ರಸಂಗ ನಡೆದಿದೆ.
ಪ್ರಧಾನಿ ಮೋದಿಯವರು ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಮತ್ತೆ ಎನ್ಎಂಪಿಎನತ್ತ ಭದ್ರತಾ ಪಡೆಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಜನರನ್ನು ಗುಂಪನ್ನು ಬದಿಗೆ ಸರಿಸಿ ಮೋದಿ ಕಾರು ಸುಗಮ ಸಂಚಾರಕ್ಕೆ ಅನುವು ಮಾಡುತ್ತಿದ್ದರು. ಈ ವೇಳೆ ಹಿಂಭಾಗದಿಂದ ಮೋದಿ ಕಾರಿನತ್ತ ಅಸಾಮಿಯೋರ್ವನು ಓಡಿ ಬಂದಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಆತನನ್ನು ಎಳೆದು ಹಾಕಿದ್ದಾರೆ.
ಕಾರ್ಯಕ್ರಮದ ಬಳಿಕ ಮೋದಿಯವರ ಎಸ್ ಪಿಜಿ ವಾಹನ ಸುಗಮವಾಗಿ ತೆರಳಲು ಜನದಟ್ಟಣೆ ತೊಡಕಾಗಿತ್ತು. ಈ ವೇಳೆ ಜನದಟ್ಟಣೆಯನ್ನು ಚದುರಿಸಲು ಮಂಗಳೂರು ಪೊಲೀಸ್ ಕಮಿಷನರ್ ಲಾಠಿ ಬೀಸಿದ ಪ್ರಕರಣವೂ ನಡೆದಿತ್ತು.
ಡಿವೈಡರ್ ಎರಿದ ಎಸ್ ಪಿಜಿ ವಾಹನ
ಮೋದಿಯವರ ಕಾರ್ಯಕ್ರಮಕ್ಕೆ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿರುವ ಎಸ್ ಪಿಜಿ ವಾಹನವು ಡಿವೈಡರ್ ಏರಿದ ಘಟನೆ ನಡೆದಿದೆ. ಜನಸಾಗರ, ವಾಹನ ದಟ್ಟಣೆಯ ನಡುವೆಯೇ ಆಗಮಿಸಿರುವ ಎಸ್ ಪಿಜಿ ವಾಹನ ಡಿವೈಡರ್ ಏರಲು ಪ್ರಯತ್ನ ಪಟ್ಟಿದೆ. ಆದರೆ ಅದು ಅಸಾಧ್ಯವಾದ ಕಾರಣ ಡಿವೈಡರ್ ನಿಂದ ಇಳಿದು ರಸ್ತೆಯಲ್ಲಿ ಸಂಚರಿಸಿದೆ.
PublicNext
02/09/2022 07:25 pm