ಮಂಗಳೂರು: ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಕಪ್ಪುಬಟ್ಟೆ ತೊಟ್ಟು ಬಂದವರನ್ನು ಭದ್ರತಾ ಪಡೆಯವರು ಬಟ್ಟೆ ಬಿಚ್ಚಿಸಿದ ಘಟನೆ ನಡೆದಿದೆ.
ನಗರದ ಬಂಗ್ರಕೂಳೂರಿನಲ್ಲಿ ಮೋದಿಯವರು ಸರಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವವರಿಗೆ ಎಸ್‌ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಕೆಲವೊಂದು ನಿಯಮಗಳನ್ನು ವಿಧಿಸಿತ್ತು. ಅದರಂತೆ ಬೆಂಕಿಪೊಟ್ಟಣ, ಲೈಟರ್, ಕರಪತ್ರ, ಕಪ್ಪುಬಟ್ಟೆಗಳು ನಿಷೇಧಿತ ವಸ್ತುಗಳು. ಅವುಗಳನ್ನು ಮೋದಿ ಕಾರ್ಯಕ್ರಮಕ್ಕೆ ತರದಿರುವಂತೆ ಕಟ್ಟಪ್ಪಣೆ ವಿಧಿಸಿತ್ತು.
ಆದ್ದರಿಂದ ಕಪ್ಪುಬಟ್ಟೆಗಳನ್ನು ತೊಟ್ಟು ಬಂದವರಿಗೆ ಕಾರ್ಯಕ್ರಮ ನಡೆಯುವ ಮೈದಾನಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಆದ್ದರಿಂದ ಕಪ್ಪುಬಟ್ಟೆ ತೊಟ್ಟು ಬಂದವರು ಅಲ್ಲಿಯೇ ಬಟ್ಟೆ ಬಿಚ್ಚಿ ಬೇರೆ ಬಣ್ಣದ ಬಟ್ಟೆಯನ್ನು ತೊಟ್ಟ ಪ್ರಸಂಗ ನಡೆಯಿತು.
PublicNext
02/09/2022 05:59 pm