ಮುಲ್ಕಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಸೊಸೈಟಿಯಲ್ಲಿ ಈ ಬಾರಿಯ ಪಡಿತರದಲ್ಲಿ ಅಕ್ಕಿ ಜೊತೆ ಗುಗ್ಗುರು ಹಾಗೂ ಜಿರಳೆ ಉಚಿತವಾಗಿ ಗ್ರಾಹಕರಿಗೆ ಪೂರೈಕೆಯಾಗುತ್ತಿದ್ದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡಿತರ ಗ್ರಾಹಕ ಹಂಝ ಪಕ್ಷಿಕೆರೆ ಮಾತನಾಡಿ ಪಕ್ಷಿಕೆರೆ ಸೊಸೈಟಿಯ ಪಂಡಿತರ ಪೂರೈಕೆಯಲ್ಲಿ ಆಹಾರ ಇಲಾಖೆಯವರುತೀರಾ ನಿರ್ಲಕ್ಷ ವಹಿಸಿದ್ದು ಈ ಬಾರಿಯ ಪಡಿತರ ಅಕ್ಕಿ ತೀರಾ ಕಳಪೆ ಮಟ್ಟದ್ದಾಗಿದ್ದು ಜಿರಳೆಗಳು ಹಾಗೂ ಗುಗ್ಗುರು ಉಚಿತವಾಗಿ ಸಿಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಸೊಸೈಟಿ ಕಾರ್ಯದರ್ಶಿಯನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಅಕ್ಕಿ ಯಾವುದೇ ಪ್ರಯೋಜನಕ್ಕೆ ಬಾರದ ರೀತಿಯಲ್ಲಿದ್ದು ಮನೆಗೆ ತೆಗೆದುಕೊಂಡು ಹೋಗಿ ಉಪಯೋಗಿಸಿದರೆ ರೋಗದ ಭೀತಿ ಯ ಲಕ್ಷಣಗಳು ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಪಂಚಾಯತ್ ಅಧ್ಯಕ್ಷರು, ಹಾಗೂ ಆಹಾರ ನಾಗರಿಕ ಪೂರೈಕೆ ಅಧಿಕಾರಿಗಳು ಸೊಸೈಟಿ ಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕಳಪೆ ಅಕ್ಕಿ ವಿತರಣೆಯ ಬಗ್ಗೆ ಸೊಸೈಟಿಯ ಕಾರ್ಯದರ್ಶಿ ಮೋಹಿನಿ ಮಾತನಾಡಿ ಕಳೆದ ಜನವರಿ 28ರಂದು ಸುಮಾರು 140 ಕ್ವಿಂಟಲ್ ಅಕ್ಕಿ ಪೂರೈಕೆಯಾಗದ್ದು ಗೋಧಿಯಲ್ಲಿ ಗುಗ್ಗುರು ಹಾಗೂ ಜಿರಳೆ ಕಾಣಿಸಿಕೊಂಡು ಅಕ್ಕಿಯ ಗೋಣಿ ಗೆ ಹರಡಿದೆ.
ಈ ಬಗ್ಗೆ ಅನೇಕ ಪಡಿತರದಾರರು ದೂರು ನೀಡಿದ್ದು ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪಂಚಾಯತ್ ಅಧ್ಯಕ್ಷರಿಗೆ ತಿಳಿಸಲಾಗಿದೆ ಎಂದರು. ಒಂದು ಮೂಲಗಳ ಪ್ರಕಾರ ಪಕ್ಷಿಕೆರೆ ಸೊಸೈಟಿ ಗೋಡೌನ್ ಹಿಂದುಗಡೆಯ ಒಂದು ಪಾರ್ಶ್ವದ ಬದಿಯಲ್ಲಿ ತಾಗಿಕೊಂಡೇ ನೀರಿನ ಟ್ಯಾಂಕ್ ಇದ್ದು ನೀರಿನ ತೇವಾಂಶದಿಂದ ಪಡಿತರ ಅಕ್ಕಿಯ ಗೋಣಿ ಒದ್ದೆಯಾಗಿ ಪಡಿತರ ಕೆಟ್ಟುಹೋಗಿ ಹುಳಗಳು ಆಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಕೂಡಲೇ ಆಹಾರ ಪೂರೈಕೆ ಅಧಿಕಾರಿಗಳು ಹಾಗೂ ಕೆಮ್ರಾಲ್ ಪಂಚಾಯತ್ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಅಕ್ಕಿ ಹಾಗೂ ಪಡಿತರ ಪೂರೈಕೆ ವ್ಯವಸ್ಥೆ ಮಾಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
Kshetra Samachara
19/02/2021 08:16 pm