ಕಾಳಾವರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಾಳಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಷಷ್ಠಿ ಉತ್ಸವದಲ್ಲಿ ಭಿಕ್ಷಾಟನೆ ನಿರತ ಮಕ್ಕಳನ್ನು ರಕ್ಷಿಸಿದೆ.
ಮಕ್ಕಳು ಮತ್ತು ಪೋಷಕರ ಜೊತೆ ಭಿಕ್ಷಾಟನೆ ಮಾಡದಂತೆ ತಿಳಿಸಲಾಯಿತು. ಇನ್ನು ಮುಂದೆ ಮಕ್ಕಳನ್ನು ಕರೆದುಕೊಂಡು ಬರದಂತೆ ಎಚ್ಚರಿಕೆ ನೀಡಿ ಪೋಷಕರೊಂದಿಗೆ ಕಳುಹಿಸಿ ಕೊಡಲಾಯಿತು. ಸಾರ್ವಜನಿಕರಿಗೆ ಜಾತ್ರೆಯಲ್ಲಿ ಭಿಕ್ಷಾಟನೆ, ಬಾಲ್ಯವಿವಾಹ ಪದ್ಧತಿ, ಬಾಲ ಕಾರ್ಮಿಕತೆ, ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್ , ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಪಿಲ, ಸಮಾಜ ಕಾರ್ಯಕರ್ತರಾದ ಯೋಗೀಶ್, ಸುರಕ್ಷಾ, ಔಟ್ ರೀಚ್ ವರ್ಕರ್ ಸುನಂದಾ ಮತ್ತು ಸಂದೇಶ ಭಾಗವಹಿಸಿದ್ದರು.
Kshetra Samachara
19/01/2021 04:27 pm