ವರದಿ: ರಹೀಂ ಉಜಿರೆ
ಕುಂದಾಪುರ: ಅನಾರೋಗ್ಯ ಕಾರಣದಿಂದ ಅಕ್ಷರಶಃ ಮಲಗಿದ್ದಲ್ಲೇ ಎಸೆಸೆಲ್ಸಿ ಪರೀಕ್ಷೆ ಬರೆದು , 580 ಅಂಕದಿಂದ ಪಾಸಾದ ಕುಂದಾಪುರದ ಹುಡುಗಿ ಶ್ರಾವ್ಯ ಕೊನೆಗೂ ಕಾಲೇಜಿಗೆ ಕಾಲಿಟ್ಟಿದ್ದಾರೆ. ಈ ಹುಡುಗಿ ಮಲಗಿದ ಸ್ಥಿತಿಯಲ್ಲೇ ಓದಿ ಉನ್ನತ ಶ್ರೇಣಿಯಲ್ಲಿ ಪಾಸಾದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಿಸಿತ್ತು.ಬಡ ಕುಟುಂಬದ ಈ ಹೆಣ್ಣುಮಗಳಿಗೆ ದಾನಿಗಳು ಸಹಾಯ ಮಾಡಿದ್ದು ಇದೀಗ ಹಲವು ಕನಸುಗಳೊಂದಿಗೆ ಶಾಲೆಯ ಮೆಟ್ಟಲು ಹತ್ತಿದ್ದಾರೆ.
ಶ್ರಾವ್ಯಾ ,ಕುಂದಾಪುರ ತಾಲೂಕು ವ್ಯಾಪ್ತಿಯ ಹಕ್ಲಾಡಿ ಗ್ರಾಮದ ಬಗ್ವಾಡಿಯ ರಾಜು ಪೂಜಾರಿ ಮತ್ತು ಸುಜಾತ ಪೂಜಾರಿ ದಂಪತಿ ಪುತ್ರಿ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಅನಾರೋಗ್ಯ ಮೆಟ್ಟಿ ನಿಂತು ಸಾಧನೆ ಮಾಡಿದ್ದಳು. ಕರುಳು ಸಂಬಂಧಿ ಕಾಯಿಲೆಯಿಂದ ಅನಾರೋಗ್ಯಕ್ಕೀಡಾಗಿ 6 ತಿಂಗಳುಗಳ ಕಾಲ ಹಾಸಿಗೆಯ ಮೇಲೆ ಮಲಗಿದ್ದ ಈಕೆ ಕೇವಲ ದೈನಂದಿನ ತರಗತಿಗಳ ನೋಟ್ಸ್ ಝೆರಾಕ್ಸ್ ಪ್ರತಿ ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 580 ಅಂಕ ಪಡೆದು ಹುಬ್ಬೇರಿಸುವಂತೆ ಮಾಡಿದ್ದಳು.
ಕಳೆದ ಮೂರು ವರ್ಷಗಳಿಂದ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಶ್ರಾವ್ಯ ಸುಮಾರು 6 ತಿಂಗಳುಗಳ ಕಾಲ ಹಾಸಿಗೆ ಹಿಡಿದಿದ್ದಳು.ಈ ನಡುವೆ ತೀವ್ರ ಅನಾರೋಗ್ಯಕ್ಲೆ ತುತ್ತಾಗಿ ಎಸ್ಎಸ್ಎಸಿಯಲ್ಲಿ ಮಲಗಿಕೊಂಡೇ ಓದಿ ಉತ್ತಮ ಅಂಕ ಗಳಿಸಿ ಸುದ್ದಿಯಾಗಿದ್ದಳು.ಸದ್ಯ ಚೇತರಿಸಿಕೊಂಡು ತಾಯಿಯೊಂದಿಗೆ ಕಾಲೇಜಿಗೆ ಬಂದ ಶ್ರಾವ್ಯಳನ್ನು, ಕಾಲೇಜಿನ ಪ್ರಾಂಶುಪಾಲರು ಹೂ ನೀಡಿ ಸ್ವಾಗತಿಸಿದ್ದಾರೆ. ವಿಜ್ಞಾನ ವಿಭಾಗಕ್ಕೆ ದಾಖಲಾದ ಈ ವಿದ್ಯಾರ್ಥಿನಿಗೊಂದು ಬೆಸ್ಟ್ ಆಫ್ ಲಕ್ ಹೇಳೋಣ.
PublicNext
02/07/2022 08:45 pm