ಬ್ರಹ್ಮಾವರ: ಸರಕಾರಿ ಹಾಸ್ಟೆಲ್ ಅಂದರೆ ಮೂಗು ಮುರಿಯೋರೇ ಜಾಸ್ತಿ. ಆದರೆ ಈ ಹಾಸ್ಟೆಲ್ ನೋಡಿದ್ರೆ ಮೂಗಿನ ಮೇಲೆ ಬೆರಳಿಡ್ತೀರಾ! ಮನೆಯ ವಾತಾವರಣಕ್ಕಿಂತ ಉತ್ತಮ ವಾತಾವರಣ ಮತ್ತು ಪಠ್ಯೇತರ ಚಟುವಟಿಕೆಗಳು ಇಲ್ಲಿವೆ. ವಿದ್ಯಾರ್ಥಿಗಳನ್ನು ಭವಿಷ್ಯದ ಪ್ರಜೆಗಳಾಗಿ ರೂಪುಗೊಳಿಸುವ ಒಂದು ಮಾದರಿ ಹಾಸ್ಟೇಲ್, ಬ್ರಹ್ಮಾವರ ಗಾಂಧಿಮೈದಾನ ಬಳಿ ಇರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ.
ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುವ ಉತ್ತರ ಕರ್ನಾಟಕದ 51 ಬಾಲಕಿಯರು ಇಲ್ಲಿದ್ದಾರೆ.ವಿದ್ಯಾರ್ಥಿ ನಿಲಯದ ಸುತ್ತ ಕಂಡು ಬರುವ ಹಣ್ಣು, ತರಕಾರಿ ಮತ್ತು ಹೂದೋಟವೇ ಇಲ್ಲಿನ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಸಾಕ್ಷಿ ನುಡಿಯುತ್ತವೆ.
ದೇವರಾಜ ಅರಸು,ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಾಲುಮರದ ತಿಮ್ಮಕ್ಕ ಎಂಬ 3 ತಂಡಗಳು ಇಲ್ಲಿದ್ದು ಬೀಜಗಳ ಬಿತ್ತನೆ ಸೇರಿದಂತೆ ಪ್ರತಿ ಗಿಡಗಳನ್ನು ಪಾಲನೆ ಮತ್ತು ಪೋಷಣೆ ಮಾಡಿ ಇದರಿಂದ ಬೆಳೆದ ತರಕಾರಿ ಇಲ್ಲಿನ ವಸತಿ ಶಾಲೆಗೆ ಬಳಸಲಾಗುತ್ತದೆ. ತ್ಯಾಜ್ಯದಿಂದ ಇಲ್ಲಿ ಕಾಂಪೋಸ್ಟ್ ಮತ್ತು ಬಳಕೆ ಆದ ಮೊಟ್ಟೆಯ ಸಿಪ್ಪೆಯಿಂದ ಗೊಬ್ಬರವನ್ನು ವಿದ್ಯಾರ್ಥಿಗಳೇ ತಯಾರು ಮಾಡುತ್ತಾರೆ.ವಿದ್ಯಾರ್ಥಿಗಳ ಓದುವ , ಊಟದ ಕೋಣೆ ಮತ್ತು ಪ್ರಾರ್ಥನಾ ಸ್ಥಳ ಇದೆಲ್ಲವೂ ಕೂಡಾ ಅಚ್ಚು ಕಟ್ಟು.ಇಲ್ಲಿನ ವಿದ್ಯಾರ್ಥಿಗಳು ರಚಿಸಿದ ನಾನಾ ಚಿತ್ರಗಳು ವಿದ್ಯಾರ್ಥಿಗಳ ಕಲ್ಪನೆಗಳಿಗೆ ಕನ್ನಡಿ ಹಿಡಿಯುತ್ತಿವೆ.
PublicNext
06/01/2022 04:47 pm