ಮಲ್ಲಾರು: ಶಾಲೆ ಆರಂಭದ ಪೂರ್ವ ತಯಾರಿ ; ಎಸ್ಡಿಪಿಐ ಯಿಂದ ಸ್ವಚ್ಚತಾ ಕಾರ್ಯಕ್ರಮ

ಕಾಪು: "ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ" ಕಾಪು ಅಹಮದಿ ಮೊಹಲ್ಲಾ ವರ್ಡ್ ವತಿಯಿಂದ ಮಲ್ಲಾರಿನ ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲಾ ಕೊಠಡಿ ಹಾಗು ಶಾಲೆಯ ಸುತ್ತಮುತ್ತಲಿನ ಪರಿಸರ ಸ್ವಚ್ಚತಾ ಕಾರ್ಯಕ್ರಮ ಗುರುವಾರ ನಡೆಯಿತು.

ಕೊರೊನಾ ಹಿನ್ನೆಲೆ ಸರಕಾರ ಘೋಷಿಸಿದ ಲಾಕ್ ಡೌನ್ ನಿಂದಾಗಿ ಶಾಲೆಗಳು ಮುಚ್ಚಿದ್ದು,ಶಾಲೆಯ ಕೊಠಡಿಗಳಲ್ಲಿ ಸ್ವಚ್ಛತೆಯ ಸಮಸ್ಯೆ ಉಂಟಾಗಿದ್ದು,

ಶಾಲೆಯ ಸುತ್ತ ಗಿಡಗಂಟಿಗಳಿಂದ ಆವರಿಸಿತ್ತು.ಇದನ್ನು ಮನಗಂಡ ಎಸ್ಡಿಪಿಐ ಮುಖಂಡ ನೂರುದ್ದೀನ್ ಹಾಗು ಫಹೀಂ ಬೆಳಪು ಇವರ ನೇತ್ರತ್ವದಲ್ಲಿ ಕಾರ್ಯಕರ್ತರು ಬೆಳಗ್ಗಿನಿಂದಲೇ ಸ್ವಚ್ಚತಾ ಕಾರ್ಯಕ್ರಮದಲ್ಲಿ ತೊಡಗಿದ್ದರು.

ಈ ಬಗ್ಗೆ ಪ್ರೌಡ ಶಾಲೆಯ ಪ್ರಾಂಶುಪಾಲರಾದ ತಾರಾ ಜಿ ಪಟ್ಗಾರ್ ಮಾತನಾಡಿ," ನಾವು ಶಾಲೆ ಆರಂಭದ ಪೂರ್ವ ತಯಾರಿಯಾಗಿ ಶಾಲೆಯನ್ನು ಶುಚಿಗೊಳಿಸುತ್ತಿದ್ದು,

ನಮ್ಮ ಬೇಡಿಕೆಗೆ ಸ್ಪಂದಿಸಿ ಸ್ಥಳೀಯ ಎಸ್ಡಿಪಿಐ ಮುಖಂಡರು ಬಹಳ ಮುತುವರ್ಜಿಯಿಂದ ಶಾಲೆಯ ಸ್ವಚ್ಚತಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬಳಿಕ ಮಾತನಾಡಿದ ಎಸ್ಡಿಪಿಐ ಮುಖಂಡ ನೂರುದ್ದೀನ್ ಪಕ್ಷದ ಕಾರ್ಯವೈಖರಿ ಬಗ್ಗೆ ವಿವರಿಸಿದರು.ಈ ಸಂದರ್ಭ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಖಾತೂನ್ ಬಿ,ಸಹ ಶಿಕ್ಷಕರಾದ ಜಾಯ್ಸ್ ಎಂ ಅಲ್ಫೋನ್ಸೊ,ಶಾಂಭವಿ ಎಸ್ ಜಿ,ಶ್ರೀನಿವಾಸ ಎಂ,ಸರಿತಾ ಎನ್ ಚಂದನ್,ಶೋಭಾ ಪಿ‌ ಪ್ರಭು ಉಪಸ್ಥಿತರಿದ್ದರು.

Kshetra Samachara

Kshetra Samachara

30 days ago

Cinque Terre

8.44 K

Cinque Terre

1

  • Nazhath Assadi
    Nazhath Assadi

    mashaAllah good work sdpi ✌