ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಮ್ಮೂರಿನ ಹುಡುಗ ಆಗ್ತಾನಾ ಕರೋಡ್ ಪತಿ!

ಉಡುಪಿ: ಜನಪ್ರಿಯ 'ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ (ಕೆಬಿಸಿ) ಭಾಗವಹಿಸುವ ಆಸೆ ಯಾರಿಗಿಲ್ಲ ಹೇಳಿ.

ಆದರೆ, ಈ ಅವಕಾಶ ಬುದ್ಧಿವಂತರಲ್ಲಿ ಬುದ್ಧಿವಂತರಿಗಷ್ಟೇ ಸಿಗುತ್ತೆ. ಉಡುಪಿಯ ಏಳನೇ ತರಗತಿ ವಿದ್ಯಾರ್ಥಿ ಅನಾಮಯ ಯೋಗೇಶ್ ದಿವಾಕರ್ ಸದ್ಯ ಈ ಅವಕಾಶ ಪಡೆದ ಅದೃಷ್ಟವಂತ. ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಈತ.

ವಿದ್ಯಾರ್ಥಿಗಳಿಗೆಂದೇ ಈ ತಿಂಗಳ 14 ರಿಂದ 17 ರ ತನಕ ಕೆಬಿಸಿ ಯ ವಿಶೇಷ ಸಂಚಿಕೆ ಬರಲಿದೆ. ಅದರಲ್ಲಿ ಭಾಗವಹಿಸುವುದಕ್ಕಾಗಿ ದೇಶಾದ್ಯಂತ ಸ್ಪರ್ಧೆ ಏರ್ಪಡಿಸಲಾಗಿತ್ತು. ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಈ ಪೈಕಿ ಇಡೀ ದೇಶದಲ್ಲಿ ಆಯ್ಕೆಯಾಗಿದ್ದು ಕೇವಲ ಎಂಟು ಮಕ್ಕಳು. ಅವರಲ್ಲಿ ಅನಾಮಯ ಕೂಡ ಒಬ್ಬ.

ಈ ಕಾರ್ಯಕ್ರಮ ಸೋನಿ ಟಿ.ವಿ.ಯಲ್ಲಿ ಡಿ.14ರಿಂದ 17ರ ವರೆಗೆ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ. ತಮ್ಮೂರಿನ ವಿದ್ಯಾರ್ಥಿ ಕೆಬಿಸಿಯಲ್ಲಿ ಕರೋಡ್ ಪತಿ ಆಗುತ್ತಾನಾ ಎಂಬ ಕುತೂಹಲ ಕರಾವಳಿ ಜನರದ್ದು.

Edited By : Nagaraj Tulugeri
Kshetra Samachara

Kshetra Samachara

12/12/2020 08:54 am

Cinque Terre

23.46 K

Cinque Terre

9

ಸಂಬಂಧಿತ ಸುದ್ದಿ