ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು ಬೀಚ್ ಏರಿಯಾದಲ್ಲಿ ಬೃಹತ್ ಉಡದ ಸವಾರಿ: "ಬಿಗಿ ಹಿಡಿತಗಾರ" ಕೊನೆಗೂ ಪಿಲಾರು ಅರಣ್ಯ ಕ್ಕೆ ರವಾನೆ

ಕಾಪು: ಕಾಪು ಬೀಚ್‌ನ ಪಾರ್ಕಿಂಗ್ ಏರಿಯಾದಲ್ಲಿ ಉಡವೊಂದು ಅನಿರೀಕ್ಷಿತವಾಗಿ ಕಾಣಿಸಿಕೊಂಡಿದ್ದು, ಪಾರ್ಕಿಂಗ್ ಪ್ರದೇಶದ ಸುತ್ತೆಲ್ಲ ಸಂಚರಿಸಿ ಕೆಲಕಾಲ ಪಾರ್ಕಿಂಗ್ ಏರಿಯಾದಲ್ಲಿದ್ದ ಜನರ ಕುತೂಹಲ ಕೆರಳಿಸುವಂತೆ ಮಾಡಿತು.

ಈ ಸಂದರ್ಭ ಕಾಪು ಲೈಟ್ ಹೌಸ್ ನಿರ್ವಹಣಾ ಸಮಿತಿಯ ಸಿಬಂದಿ ಪ್ರಶಾಂತ್ ಕರ್ಕೇರ, ಅರಣ್ಯ ಇಲಾಖೆ ಸಿಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ರಕ್ಷಕ ಮಂಜುನಾಥ್, ಅಭಿಲಾಷ್ ಅವರು ಸ್ಥಳೀಯರಾದ ಶಿವಾನಂದ ಪೂಜಾರಿ, ನಿತೇಶ್ ಕುಮಾರ್, ಚಂದ್ರಶೇಖರ ಬಂಗೇರ, ವಿನೋದ್ ಶ್ರೀಯಾನ್, ಗಣೇಶ್, ಮಹಮ್ಮದ್ ಇಕ್ಬಾಲ್ ಮೊದಲಾದವರ ಸಹಕಾರದೊಂದಿಗೆ ಉಡವನ್ನು ಸೆರೆ ಹಿಡಿದರು.

ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಅವರ ಮಾರ್ಗದರ್ಶನದಲ್ಲಿ, ಕಾಪು ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್‌ದಾಸ್ ಶೆಟ್ಟಿ, ಗುರುರಾಜ್ ಕೆ. ಅವರ ನೇತೃತ್ವದಲ್ಲಿ ಉಡವನ್ನು ವಶಕ್ಕೆ ಪಡೆದುಕೊಂಡು ಅರಣ್ಯ ಇಲಾಖೆಯ ಜೀಪಿನಲ್ಲಿ ಕೊಂಡೊಯ್ದು, ಪಿಲಾರು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.

Edited By :
Kshetra Samachara

Kshetra Samachara

30/09/2020 09:12 pm

Cinque Terre

23.05 K

Cinque Terre

0

ಸಂಬಂಧಿತ ಸುದ್ದಿ