ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದ ಅನಮಯ ಮನೆಯಲ್ಲಿ ಸಂಭ್ರಮ

ಉಡುಪಿ: ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿ ಅನಮಯ ಜನಪ್ರಿಯ ಕೌನ್ ಬನೇಗಾ ಕರೋಡ್ ಪತಿ ಕ್ವಿಝ್ ನಲ್ಲಿ ಐವತ್ತು ಲಕ್ಷ ರೂ. ಗೆದ್ದು ಇಡೀ ದೇಶಕ್ಕೇ ಕೀರ್ತಿ ತಂದ ಸುದ್ದಿ ಹಳೆಯದು.

ಇದೀಗ ಅನಮಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ತನ್ನ ಚಾಕಚಕ್ಯತೆ, ಬುದ್ಧಿವಂತಿಕೆಯಿಂದ ಕೂಡಿದ ಹುಡುಗನ ಪ್ರತಿಭೆಗೆ ಕರಾವಳಿ ಮಾತ್ರ ಅಲ್ಲ, ದೇಶದ ಜನರೇ ಫಿದಾ ಆಗಿದ್ದಾರೆ. ತಮ್ಮ ಮಗನ ಸಾಧನೆ ಬಗ್ಗೆ ಮನೆಯವರಿಗೂ ಅಪಾರ ಹೆಮ್ಮೆ. ಇದೀಗ ಪ್ರೈಝ್ ಗೆದ್ದ ಪೋರನನ್ನೊಮ್ಮೆ ನೋಡಲು, ಮಾತಾಡಿಸಲು ಅನಮಯನ ಮನೆಗೆ ಬರುವವರ ಸಂಖ್ಯೆಯೂ ಜಾಸ್ತಿಯಾಗಿದೆ.

ಉಡುಪಿಯ ಅಜ್ಜರಕಾಡುವಿನಲ್ಲಿ ವಾಸವಿರುವ ಅನಮಯ, ರೇಸ್ ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾನೆ. ಮುಂದೆ ಅದೇ ಕ್ಷೇತ್ರದಲ್ಲಿ ಹೆಸರು ಮಾಡುವ ಇಚ್ಛೆ ಈ ಹುಡುಗನದ್ದು. ಕೌನ್ ಬನೇಗಾ ದಲ್ಲಿ ಐವತ್ತು ಲಕ್ಷ ಗೆದ್ದ ಬಳಿಕ ಉಡುಪಿಯಲ್ಲಿ ಈತ ದಿನಬೆಳಗಾಗುವುದರೊಳಗೆ ಸೆಲೆಬ್ರಿಟಿ ಆಗಿದ್ದಾನೆ.

Edited By :
Kshetra Samachara

Kshetra Samachara

18/12/2020 09:33 pm

Cinque Terre

35.47 K

Cinque Terre

7

ಸಂಬಂಧಿತ ಸುದ್ದಿ