ಪಬ್ಲಿಕ್ ನೆಕ್ಸ್ಟ್ ಸ್ಪೆಷಲ್
ಉಳ್ಳಾಲ ಮಂಗಳೂರು ನಗರದ ಹೊರವಲಯದಲ್ಲಿರುವ ಕಡಲ ತೀರದಲ್ಲಿರುವ ಪ್ರದೇಶ. ಇಲ್ಲಿ ವಿವಿಧ ಧರ್ಮೀಯರು ವಾಸಿಸುತ್ತಿದ್ದಾರೆ. ಇತ್ತೀಚಿಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರು ಉಳ್ಳಾಲದಲ್ಲಿ ಮುಸ್ಲಿಂ ಸಮುದಾಯದವರ ಜನಸಂಖ್ಯೆ ಹೆಚ್ಚಿರುವ ಕಾರಣ ಪಾಕಿಸ್ತಾನದಂತೆ ಬಿಂಬಿಸಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ನಿಜಕ್ಕೂ ಉಳ್ಳಾಲದ ನೈಜ ಪರಿಸ್ಥಿತಿ ಹೇಗಿದೆ ಎಂಬುದು ನಿಮಗೆ ಗೊತ್ತಾ..? ನಾವು ಸರಿಯಾಗಿ ನೋಡಿದರೆ ಸೌಹಾರ್ದಯುತ ವಾತಾವರಣದ ಜೊತೆಗೆ ಸೌಹಾರ್ದಯುತ ಮನೋಭಾವವನ್ನು ಇಲ್ಲಿ ನೋಡಬಹುದು.
ಶ್ರೀ ಹರಿ ನಿವಾಸ ಎಂಬ ಮನೆ ಉಳ್ಳಾಲದ ಸುಭಾಷ್ ನಗರದ ದೀನ್ ದಯಾಳ್ ರಸ್ತೆಯಲ್ಲಿದೆ. ಇಲ್ಲಿ ನಿವೃತ್ತ ಸರಕಾರಿ ಅಧಿಕಾರಿ ದೇವೇಂದ್ರ ಪುತ್ರನ್ ತಮ್ಮ ಧರ್ಮಪತ್ನಿ ಜತೆ ವಾಸಿಸುತ್ತಿದ್ದರು. ಸುಖಿ ಜೀವನ ನಡೆಸುತ್ತಿದ್ದ ಈ ದಂಪತಿಗೆ ಮಕ್ಕಳಿಲ್ಲದ ಕೊರಗು ಇತ್ತು.
ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಂಬಂಧ ಕಾಯಿಲೆಗೆ ತುತ್ತಾಗಿದ್ದ ಈ ದಂಪತಿಗೆ ಒಂದು ಆಸರೆ ಬೇಕಿತ್ತು. ಆಗ ಮಗನಂತೆ ನೆರವಾಗಿದ್ದೇ ಪಕ್ಕದ ಮನೆಯ ರಾಝಿಕ್ ಉಳ್ಳಾಲ್ ಎಂಬ ಯುವಕ.
ತಡರಾತ್ರಿ ಕೂಡಾ ಕರೆ ಮಾಡಿದರೂ ಸಹಾಯಕ್ಕೆ ಬರುತ್ತಿದ್ದ ರಾಝಿಕ್ ಈ ದಂಪತಿ ಪಾಲಿಗೆ ಮಗನಂತೆ ಆಗಿದ್ದರು. ನಮಗೆ ಮಕ್ಕಳಿಲ್ಲದಿದ್ದರೂ ನೆರೆಮನೆಯ ರಾಝಿಕ್ ನಮ್ಮ ಪಾಲಿಗೆ ಮಗನಂತಿದ್ದರು ಎಂದು ಗದ್ಗತಿರಾಗಿದ್ದರು ದೇವೇಂದ್ರ ಪುತ್ರನ್.
ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುವಾಗ ಬಿಲ್ ಕಟ್ಟಲು ಹಣದ ಕೊರತೆ ಇದ್ದಾಗ ಸ್ವತಃ ರಾಝಿಕ್ ಅವರೇ ತಮ್ಮ ಕಿಸೆಯಿಂದ ಹಣವನ್ನು ಪಾವತಿಸಿದ್ದರು. ಅಷ್ಟೇ ಅಲ್ಲ ಇತ್ತೀಚಿಗೆ ದೇವೇಂದ್ರ ಪುತ್ರನ್ ಮೃತಪಟ್ಟಾಗ ಸ್ವತಃ ರಾಝೀಕ್ ಅವದ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರಕ್ಕೆ ನೆರವಾಗಿದ್ದರು.
ಆಸ್ಪತ್ರೆಯ ಶವಾಗಾರದಿಂದ ಹಿಡಿದು ಪಾರ್ಥೀವ ಶರೀರದ ಮೇಲಿನ ಅಂತಿಮ ವಿಧಿ ವಿಧಾನಗಳು ಮಾಡುವಲ್ಲಿ ರಾಝಿಕ್ ನೆರವು ನೀಡಿದ್ದರು. ಆಸರೆಯಾಗಿದ್ದ ರಾಝಿಕ್‍ನನ್ನು ಈ ದಂಪತಿ ಮಗನಂತೆ ಕಂಡಿದ್ದರು. ತಮ್ಮ ಮಕ್ಕಳಿಲ್ಲದ ಕೊರಗನ್ನು ರಾಝಿಕ್ ಮುಖ ನೋಡಿ ಮರೆಯುತ್ತಿದ್ದರು.
ಆದರೆ ಕೆಲ ದಿನಗಳ ಹಿಂದೆ ದೇವೇಂದ್ರ ಪುತ್ರನ್ ನಿಧನರಾಗಿದ್ದಾರೆ. ಅವರನ್ನು ಉಳಿಸಲಾಗಲಿಲ್ಲ ಎಂಬ ಕೊರಗು ರಾಝಿಕ್ ರದ್ದು. ಏನೇ ಆಗಲಿ, ವೃದ್ದ ಮಹಿಳೆಗೆ ನಾನು ಮಗನಂತೆ ನೆರವಾಗುವೆ ಎಂದು ಹೇಳಿದ್ದಾರೆ. ರಾಝಿಕ್ ಮತ್ತು ದೇವೇಂದ್ರ ಅವರ ಮನೆಯ ಕೌಂಪೌಂಡ್ ಗೋಡೆಯೊಂದು ಬಿಟ್ಟರೆ ಇವರ ಮಧ್ಯೆ ಯಾವುದೇ ಜಾತಿ ಧರ್ಮದ ಗೋಡೆ ಇಲ್ಲ. ಇದೇ ಅಲ್ಲವೇ ಸೌಹಾರ್ದ..?
Kshetra Samachara
06/12/2020 02:56 pm