ಉಡುಪಿ: ಅಂಧ ಸಂಗೀತ ಕಲಾವಿದನ ಹಣವನ್ನು ಜೇಬುಗಳ್ಳರು ದೋಚಿದ್ದು, ಕಲಾವಿದ ತನ್ನೂರು ಬಾಗಲಕೋಟೆಗೆ ತೆರಳಲು ಟಿಕೆಟ್ ಗೆ ಹಣವಿಲ್ಲದೆ ಉಡುಪಿಯಲ್ಲಿ ಅಸಹಾಯಕ ಪರಿಸ್ಥಿತಿ ಎದುರಿಸಿದ್ದಾನೆ.
ಈ ಸಂದರ್ಭ ಉಡುಪಿ ನಾಗರಿಕ ಸಮಿತಿಯ ಸಹೃದಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ನೆರವಿಗೆ ಬಂದಿದ್ದು, ಅಂಧ ಕಲಾವಿದನನ್ನು ಬಾಗಲಕೋಟೆಗೆ ಬಸ್ಸು ಹತ್ತಿಸಿ ಕಳಿಸಿಕೊಟ್ಟಿದ್ದಾರೆ.
ನಗರಸಭೆ ಆಸ್ತಿ ತೆರಿಗೆ ಸಲಹಾ ಕೇಂದ್ರದ ಸಿಬ್ಬಂದಿ ವಿದ್ಯಾ, ಚಂದ್ರಾವತಿ, ಪೂರ್ಣಿಮಾ, ತ್ರಿವೇಣಿ ಅವರು ಹಸಿದ ಕಲಾವಿದನಿಗೆ ಆಹಾರದ ವ್ಯವಸ್ಥೆ, ಪ್ರಯಾಣಿಸಲು ಟಕೆಟ್ ಗೆ ಬೇಕಾದ ಹಣ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
Kshetra Samachara
02/12/2020 10:55 am