ಪರ್ಕಳ: ಈ ಬಾರಿ ದೀಪಾವಳಿಗೆ ಅಷ್ಟಾಗಿ ಪಟಾಕಿ ಸದ್ದು ಇಲ್ಲ. ಆದರೆ ಹಸಿರು ಪಟಾಕಿ ಮತ್ತು ದೇಸಿ ಪಟಾಕಿ ಸಾಕಷ್ಟು ಸದ್ದು ಮಾಡುತ್ತಿವೆ.
ಪರ್ಕಳದಲ್ಲಿ ಗ್ರಾಮೀಣ ಜನರು ಈ ಬಾರಿ ದೇಸಿ ಪಟಾಕಿ ತಯಾರು ಮಾಡಿದ್ದಾರೆ. ಪ್ರಕೃತಿಯಲ್ಲಿ ಸಿಗುವ ಪರಿಕರಗಳನ್ನು ಉಪಯೋಗಿಸಿ ಆಕರ್ಷಕ ಬಿದಿರಿನ ಪಟಾಕಿ ತಯಾರು ಮಾಡಲಾಗಿದೆ. ಇದಕ್ಕೆ ಬಿದಿರು ಮತ್ತು ಸೀಮೆಎಣ್ಣೆ ಇದ್ದರೆ ಸಾಕು, ಸೈಕಲ್ ಪಂಪನಲ್ಲಿ ಗಾಳಿ ಹಾಕಿ ಒಂದು ಬಿದಿರಿನ ತುದಿಗೆ ಬೆಂಕಿ ತಗುಲಿಸಿರೆ ಸಾಕು, ಯಾವುದೇ ಪಟಾಕಿಗೂ ಕಡಿಮೆಯಿಲ್ಲದಂತೆ ಇದು ಸದ್ದು ಮಾಡುತ್ತದೆ.
ಹಿಂದೆ ಗ್ರಾಮೀಣ ಭಾಗದ ಜನರು ಬಿದಿರು ಪಟಾಕಿಯನ್ನು ಪ್ರಾಣಿಗಳನ್ನು ಓಡಿಸಲು ಉಪಯೋಗಿಸುತ್ತಿದ್ದರಂತೆ.ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಪಟಾಕಿಗಳಿಗೆ ನಿರ್ಬಂಧ ಇರುವುದರಿಂದ ಪರ್ಕಳದ ಜನತೆ ಬಿದಿರಿನ ಪಟಾಕಿಯ ಮೊರೆ ಹೋಗಿದ್ದಾರೆ. ಮಾತ್ರವಲ್ಲ ನಗರ ಭಾಗದ ಜನರು ಈ ಪರಿಸರಪ್ರೇಮಿ,ದೇಸೀ ಪಟಾಕಿ ಬಳಸುವಂತೆ ಮನವಿ ಮಾಡಿದ್ದಾರೆ. ಅಂದಹಾಗೆ ಈ ಪಟಾಕಿ ಸದ್ದು ಮಾಡುತ್ತದೆ ಆದರೆ ಯಾವುದೇ ಪರಿಸರ ಮಾಲಿನ್ಯ ಆಗುವುದಿಲ್ಲ.ಪುರಂದರ ಕೋಟ್ಯಾನ್ ಬೆಳ್ಳಂಪಳ್ಳಿ ಎಂಬುವರು ಇದರ ರೂವಾರಿ.
Kshetra Samachara
13/11/2020 08:14 pm