ಉಡುಪಿ: ಮಣಿಪಾಲ ಪರಿಸರದಲ್ಲಿ ಉಗ್ರ ರೀತಿಯಲ್ಲಿ ವರ್ತಿಸುತ್ತಿದ್ದ ಅಪರಿಚಿತ ಮಾನಸಿಕ ಅಸ್ವಸ್ಥನ ರಕ್ಷಣಾ ಕಾರ್ಯಚರಣೆಯು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಡೆಯಿತು.
ಮಣಿಪಾಲ ಪೋಲಿಸ್ ಠಾಣೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಹಾಗೂ ಸ್ಥಳಿಯರು ಕಾರ್ಯಚರಣೆಗೆ ಸಹಕಾರ ನೀಡಿದರು.
ಕಳೆದ ಹಲವಾರು ದಿನಗಳಿಂದ ನಗರದ ರಸ್ತೆಗಳಲ್ಲಿ ಅಪರಿಚಿತ ಮಾನಸಿಕ ಅಸ್ವಸ್ಥನೋರ್ವ ತಿರುಗಾಡುತ್ತಿದ್ದ. ಈತನ ಉಪಟಳದಿಂದ ಸಾರ್ವಜನಿಕರು ಭೀತಿಗೊಳಗಾಗಿದ್ದರು.
ಅಶ್ಲಿಲ ವರ್ತನೆ, ವಿನಾಕಾರಣ ವಾಹನಗಳ ಮೇಲೆ ಕಲ್ಲುಗಳನ್ನು ಎಸೆಯುವುದು, ಮಹಿಳೆಯರನ್ನು ಹಿಂಬಾಲಿಸುವ ವಿಕೃತ ಕೃತ್ಯಗಳನ್ನು ಈತ ಮಾಡುತ್ತಿದ್ದಮ.ಹೀಗಾಗಿ ತೊಂದರೆಗೊಳಗಾದ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು. ಈತನ ಉಗ್ರ ವರ್ತನೆಯಿಂದ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು, ಅಂಗವಿಕಲರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಶ್ರೀಮತಿ ರತ್ನ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ತಕ್ಷಣ ಮನವಿಗೆ ಸ್ಪಂದನೆ ದೊರೆತು ಕಾರ್ಯಚರಣೆ ನಡೆಯಿತು.
ಮಣಿಪಾಲ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆ ಸನಿಹ ಅಸ್ವಸ್ಥನ ಇರುವಿಕೆ ಪತ್ತೆ ಹಚ್ಚಿಸಿ, ಪೊಲೀಸರ ಸಹಾಯದಿಂದ ವಶಕ್ಕೆ ಪಡೆಯಲಾಯಿತು. ನಂತರ ಅಸ್ವಸ್ಥನನ್ನು ದೊಡ್ಡಣಗುಡ್ಠೆಯ ಡಾ ಎ. ವಿ. ಬಾಳಿಗ ಆಸ್ಪತ್ರೆಗೆ ದಾಖಲು ಪಡಿಸಲಾಯಿತು.
ಈ ಕಾರ್ಯಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಕೆ.ಬಾಲಗಂಗಾಧರ ರಾವ್ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಉಚಿತ ಅಂಬುಲೆನ್ಸ್ ಸೇವೆಯನ್ನು ಒದಗಿಸಿ ಮಾನವೀಯತೆ ಮೆರೆದಿದೆ.
Kshetra Samachara
10/11/2020 02:25 pm