ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಕೇರಳ ಮೂಲದ ವಿಶೇಷ ಚೇತನ ವ್ಯಕ್ತಿಯ ಕೃಷಿ ಸಾಹಸಗಾಥೆ !

ಬೈಂದೂರು : ಕೈಕಾಲು ಗಟ್ಟಿಮುಟ್ಟಾಗಿದ್ದು ,ಆರೋಗ್ಯವಾಗಿರುವ ಕೆಲವರು ಇನ್ನೊಬ್ಬರಿಗೆ ಹೊರೆಯಾಗಿ ಬದುಕುವುದುಂಟು! ಆದರೆ ನಾವಿಲ್ಲಿ ಹೇಳಹೊರಟಿರುವ ಸ್ವಾವಲಂಬಿ ಕೃಷಿಕ ,ಆರೋಗ್ಯವಂತರಿಗೂ ಮಾದರಿ.

ಶೇ.80 ರಷ್ಟು ದಿವ್ಯಾಂಗ ಹೊಂದಿರುವ ಈ ವ್ಯಕ್ತಿ ತನ್ನ ಎಲ್ಲ ದೈಹಿಕ ಸಮಸ್ಯೆಗಳನ್ನೂ ಮೀರಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.

ಈ ವ್ಯಕ್ತಿಯ ಹೆಸರು ಬಾಲಕೃಷ್ಣನ್. ಇವರ ಮೂಲ ಕೇರಳ.ಆದರೆ ಹಲವು ವರ್ಷಗಳಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಮುದೂರಿನಲ್ಲಿ ವಾಸವಾಗಿದ್ದಾರೆ.

ಬಾಲಕೃಷ್ಣ ಶೇಕಡ 80 ರಷ್ಟು ದಿವ್ಯಾಂಗ ಹೊಂದಿರುವ ವ್ಯಕ್ತಿ.ಆದರೆ ಇದು ಅವರ ಈಗಿನ ಸಾಧನೆಗೆ ಯಾವುದೇ ಅಡ್ಡಿಯಾಗಿಲ್ಲ.

ನಿಮಗೆ ಆಶ್ಚರ್ಯವಾಗಬಹುದು,ಇಪ್ಪತ್ತರ ಹರೆಯದ ಯುವಕರೂ ನಾಚುವಂತಹ ಲವಲವಿಕೆ ಇವರದ್ದು.

ತಮಗಿದ್ದ ಮೂರು ಎಕರೆ ಭೂಮಿಯನ್ನು ನಿಜಕ್ಕೂ ಬಂಗಾರವಾಗಿ ಪರಿವರ್ತಿಸಿದ್ದಾರೆ ಬಾಲಕೃಷ್ಣನ್.

ಹುಟ್ಟಿನಿಂದಲೇ ಶೇಕಡ 80ರಷ್ಟು ದಿವ್ಯಾಂಗತೆ ಹೊಂದಿರುವ ಬಾಲಕೃಷ್ಣನ್ ,ಅದಕ್ಕಾಗಿ ಕೊರಗಲಿಲ್ಲ.

ಬದಲಾಗಿ ತಮ್ಮ ಮೂರು ಎಕರೆ ಜಮೀನಿನಲ್ಲೇ ದುಡಿದು ಕೃಷಿಕರಾಗಲು ನಿರ್ಧರಿಸಿ ಅದರಂತೆಯೇ ಬದುಕುತ್ತಿದ್ದಾರೆ.

ಹತ್ತಾರು ಬಗೆಯ ಸಸಿಗಳನ್ನು ನೆಟ್ಟು ಅದನ್ನು ಬೇಕಾದವರಿಗೆ ಮಾರಾಟ ಮಾಡುತ್ತಾರೆ.

ಸಸಿಗಳನ್ನಾ ತಾವೇ ಪೊಷಿಸುತ್ತಾರೆ. ವಿವಿಧ ಬಗೆಯ ನರ್ಸರಿ ಗಿಡಗಳ ಜೊತೆಗೆ ರಬ್ಬರ್ ,ಕಾಳುಮೆಣಸು, ಅಡಿಕೆ ಗೇರು, ಮಾವು ಸಹಿತ ಔಷಧೀಯ ಸಸ್ಯಗಳನ್ನು ಕೂಡ ಬಾಲಕೃಷ್ಣನ್ ಬೆಳೆಸಿದ್ದಾರೆ.

ಕೇವಲ ಕೃಷಿಕರಿಗೆ ಮಾತ್ರ ಅಲ್ಲದೆ ಎಲ್ಲ ಕ್ಷೇತ್ರದ ಜನರಿಗೂ ಇವರೊಬ್ಬ ಮಾದರಿ ವ್ಯಕ್ತಿ ಎಂದರೂ ತಪ್ಪಲ್ಲ.

ಪ್ರಗತಿಪರ ಕೃಷಿಕರಾಗಿ ಮೂಡಿಬಂದಿರುವ ಬಾಲಕೃಷ್ಣನ್ ಬೆಸ್ಟ್ ಫಾರ್ಮರ್ಸ್ ಅವಾರ್ಡ್ ಸಹಿತ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಎಲೆ ಮರೆಯ ಕಾಯಿಯಂತೆ ,ಸ್ವಾಭಿಮಾನದ ಜೊತೆಗೆ ಸ್ವಾವಲಂಬಿ ಜೀವನ ನಡೆಸುತ್ತಿರುವ ಈ ವಿಶೇಷಚೇತನ ಕೃಷಿಕನನ್ನು ನಾವು ಪ್ರೋತ್ಸಾಹಿಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

19/10/2020 10:18 am

Cinque Terre

26.73 K

Cinque Terre

3

ಸಂಬಂಧಿತ ಸುದ್ದಿ