ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲ್ನಾಡ್: ನಿಯಂತ್ರಣ ತಪ್ಪಿ ಅಂಗಡಿಗೆ ಡಿಕ್ಕಿ ಹೊಡೆದ ಕಾರು; ಚಾಲಕ ಪಾರು

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೋಲ್ನಾಡು ಸುಂದರ್ ರಾಮ್ ಶೆಟ್ಟಿ ಆಡಿಟೋರಿಯಂ ಎದುರು ಭಾಗದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ ಹಳೆಯಂಗಡಿ ಇಂದ್ರ ನಗರ ನಿವಾಸಿ ಫಾರಿಷ್ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ.

ಮುಲ್ಕಿ ಸಮೀಪದ ಕೋಲ್ನಾಡ್ ಕಡೆಯಿಂದ ಹಳೆಯಂಗಡಿಯ ಇಂದ್ರ ನಗರದಲ್ಲಿರುವ ತನ್ನ ಮನೆಗೆ ಫಾರಿಷ್ ಅವರು ಕಾರಿನಲ್ಲಿ ಬರುತ್ತಿದ್ದಾಗ ಏಕಾಏಕಿ ದ್ವಿಚಕ್ರ ವಾಹನ ಸವಾರ ಅಡ್ಡ ಬಂದಿದೆ. ಅಪಘಾತವನ್ನು ತಪ್ಪಿಸಲು ಯತ್ನಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ತೀರಾ ಎಡಬದಿಗೆ ಚಲಿಸಿ ಸೋಜಾ ಎಲೆಕ್ಟ್ರಿಕಲ್ಸ್ ಅಂಗಡಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಅಂಗಡಿಯ ಕೋಣೆಗಳಿಗೆ ಹಾನಿಯಾಗಿದ್ದು ಕಾರಿನ ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ಸ್ಥಳದಲ್ಲಿ ಎಲೆಕ್ಟ್ರಿಕಲ್ಸ್ ಅಂಗಡಿಯ ಫಿಲಿಪ್ ಜವಾಹರ್ ಡಿಸೋಜಾ ಹಾಗೂ ಅವರ ಬೈಕ್ ಇರುತ್ತಿದ್ದು ಅಂಗಡಿಗೆ ಬರುವುದು ತಡವಾದ ಕಾರಣ ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಳಿಕ ಕ್ರೇನ್ ಮೂಲಕ ಕಾರನ್ನು ತೆರವುಗೊಳಿಸಲಾಯಿತು

Edited By : Somashekar
Kshetra Samachara

Kshetra Samachara

06/09/2022 04:47 pm

Cinque Terre

9.13 K

Cinque Terre

0

ಸಂಬಂಧಿತ ಸುದ್ದಿ