ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಡಲಲ್ಲಿ ದೋಣಿಗೆ ಮಡಲ್ ಮೀನಿನ ಪ್ರಹಾರ!

ಮಂಗಳೂರು: ಆಳಸಮುದ್ರ ಮೀನುಗಾರಿಕೆ ವೇಳೆ ಮೀನು ಡಿಕ್ಕಿ ಹೊಡೆದು ದೋಣಿಯೇ ಹಾನಿಗೀಡಾಗಿರುವ ಘಟನೆ ಮಂಗಳೂರಲ್ಲಿ ನಡೆದಿದೆ.

ದೊಡ್ಡ ಗಾತ್ರದ, ಚೂಪು ಬಾಯಿ, ಮುಖ ಹೊಂದಿರುವ ತುಳುವಿನಲ್ಲಿ 'ಮಡಲ್ ಮೀನ್' ಎಂದು ಕರೆಯಲ್ಪಡುವ ಈ ಮತ್ಸ್ಯ ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ದೋಣಿಗೆ ರಭಸದಿಂದ ಡಿಕ್ಕಿ ಹೊಡೆದಿದೆ.

ಈ ಹೊಡೆತದ ಪರಿಣಾಮವಾಗಿ ಚೂಪಾಗಿರುವ ಅಷ್ಟೇ ಸುಂದರವಾಗಿರುವ ಈ ಮೀನಿನ ಬಾಯಿ ಮುರಿದು ರಕ್ತಸ್ರಾವ ಉಂಟಾಯಿತು. ಅತ್ತ ಮೀನಿನ ಮಾರಕ ಪ್ರಹಾರಕ್ಕೆ ದೋಣಿಯೂ ಹಾನಿಗೀಡಾಗಿದೆ. ಈ ದೋಣಿ ಮಂಗಳೂರು ಮೀನಿಗಾರಿಕೆ ದಕ್ಕೆಯಿಂದ ಕಡಲಿಗೆ ತೆರಳಿತ್ತು‌.

Edited By : Manjunath H D
Kshetra Samachara

Kshetra Samachara

13/02/2021 06:36 pm

Cinque Terre

25.55 K

Cinque Terre

1

ಸಂಬಂಧಿತ ಸುದ್ದಿ