ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೂಕ ಪ್ರಾಣಿಗಳಿಗೆ ಅನ್ನದಾತೆ,ಮಂಗಳೂರಿನ ಈ ನಮ್ಮ ರಜನಿಯಕ್ಕ..!

ಮಂಗಳೂರು: ಆ ಮಹಿಳೆ ಎಲ್ಲರಂತಲ್ಲ. ಅವ್ರು ತಮ್ಮ ಅಭಿರುಚಿ, ಪ್ರಯತ್ನದ ಮೂಲಕ ಎಲ್ಲರ ಗಮನ ಸೆಳೆದವರು. ಲಾಕ್ ಡೌನ್ ಸಮಯದಲ್ಲಿ ಅನ್ನ, ಆಹಾರ ಸಿಗದೇ ಬಸವಳಿದಿದ್ದ ಶ್ವಾನಗಳ ಹಸಿವು ನೀಗಿಸಿದವರು ಹೀಗೆ ಹೇಳಿದಾಕ್ಷಣ ನಿಮಗೆ ಅವ್ರ ಬಗ್ಗೆ ಕೇಳೋಕೇ ಕುತೂಹಲ ಮೂಡ್ತಿದ್ಯಾ..? ಬನ್ನಿ, ಅವ್ರ ಪರಿಚಯವನ್ನು ನಾವು ಮಾಡಿಸ್ತೀವಿ,.!ಧೈರ್ಯದಿಂದಲೇ ಮಾತಾಡ್ತಿರೋ ಮಹಿಳೆ.. ಹಾಗೇ ಮಾಡ್ಬೇಕು, ಹೀಗೆ ಮಾಡ್ಬೇಕು ಅಂತಿರೋ ದಿಟ್ಟೆ, 30 ಅಡಿ ಆಳದ ಬಾವಿಗಿಳಿದು ಶ್ವಾನ ಕಾಪಾಡಿದ ಗಟ್ಟಿಗಿತ್ತಿ ರಜನಿ ದಾಮೋದರ ಶೆಟ್ಟಿ. ಮೂಲತಃ ಮುಂಬೈ ಮೂಲದವರಾದ್ರೂ ಹಲವಾರು ವರ್ಷಗಳಿಂದ ಮಂಗಳೂರು ನಗರದ ಬಲ್ಲಳ್ ಬಾಗ್ ನಲ್ಲಿ ವಾಸಿಸುತ್ತಿದ್ದಾರೆ.

ಇವರಿಗೆ ಮೂಕ ಪ್ರಾಣಿಗಳ ಮೇಲೆ ಅತೀವ ಮಮತೆ. ಶ್ವಾನಗಳೆಂದರೆ ಪಂಚಪ್ರಾಣ. ಪ್ರಾಣಿಗಳ ಜೀವ ಕಾಪಾಡುವುದರಲ್ಲಿ ಇವರು ಎತ್ತಿದ ಕೈ. ಇವ್ರಿಗೆ ಬಾಲ್ಯದಿಂದಲೇ ಪ್ರಾಣಿಗಳೆಂದರೆ ಅಪಾರ ಕಾಳಜಿ, ಮಮತೆ. ಮಂಗಳೂರಲ್ಲಿ ಸ್ವಂತ ಮನೆ ಇಲ್ಲದಿದ್ರೂ ತಮ್ಮ ಬಾಡಿಗೆ ಮನೆಯಲ್ಲೇ 20ಕ್ಕೂ ಅಧಿಕ ಶ್ವಾನಗಳು ಹಾಗೂ ಬೆಕ್ಕುಗಳು ಸೇರಿದಂತೆ ಇತರ ಪಕ್ಷಿಗಳನ್ನು ಸಾಕುತ್ತಿದ್ದಾರೆ. ಯಾವುದೋ ಒಂದು ಸಂದರ್ಭದಲ್ಲಿ ಗಾಯಗೊಂಡು ಪ್ರಾಣ ಕಳೆದುಕೊಳ್ಳುವ ಸಂದರ್ಭದಲ್ಲಿರುವ ಮೂಕಪ್ರಾಣಿಗಳನ್ನು ತಂದು ರಕ್ಷಣೆ ಮಾಡಿ ಆರೈಕೆ ಮಾಡುತ್ತಿದ್ದಾರೆ.

ರಜನಿಯವರ ಕುಟುಂಬ ಪ್ರತಿನಿತ್ಯ ಬೀದಿಗಳಲ್ಲಿ ಅಲೆದಾಡುವ ಸುಮಾರು 450 ಕ್ಕೂ ಹೆಚ್ಚು ನಾಯಿಗಳಿಗೆ ಅನ್ನ, ಅಹಾರ ನೀಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಬಾವಿಗೆ ಬಿದ್ದ ನಾಯಿಯನ್ನು ಈ ಮಹಿಳೆ ರಕ್ಷಿಸಿದ ವಿಡಿಯೋವೊಂದು ಭಾರೀ ವೈರಲ್ ಆಗಿ ಸುದ್ದಿಯೂ ಆಗಿತ್ತು.

ಮೊದ ಮೊದಲು ಬೀದಿ ಬದಿಗಳಲ್ಲಿ ಅನಾಥವಾಗಿ, ಅಸ್ವಸ್ಥಗೊಂಡಿದ್ದ ಬೀದಿನಾಯಿಗಳನ್ನು ರಕ್ಷಿಸಿ ಆಹಾರ ನೀಡಲು ಆರಂಭಿಸಿದ್ದ ಇವರು ಇದೀಗ 450 ಕ್ಕೂ ಅಧಿಕ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಿದ್ದಾರೆ.

ಇನ್ನು ರಜನಿಯವರ ಪತಿ ದಾಮೋದರ ಶೆಟ್ಟಿ ಟೂರಿಸ್ಟ್ ಕ್ಯಾಬ್ ಡ್ರೈವರ್. ಇವರ ದುಡಿಮೆಯೇ ಜೀವನಕ್ಕೆ ಆಧಾರ.

ಮಕ್ಕಳು ಓದುತ್ತಿದ್ದಾರೆ. ನನ್ನ ಕಾರ್ಯಕ್ಕೆ ಪತಿ, ಕುಟುಂಬದವರ ಜತೆಗೆ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಶಾಸಕರು ಸೇರಿದಂತೆ

ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಶ್ವಾನ ಪ್ರಿಯೆ ರಜನಿ.ಪ್ರಾಣಿಗಳ ಪಾಲಿಗೆ ಆಪತ್ಬಾಂದವ ಆಗಿರೋ ರಜನಿಯವರ ಈ ಮಾನವೀಯತೆಯ ಕೆಲಸ ನಿಜಕ್ಕೂ ಮಾದರಿಯಾಗಿದೆ.ಪ್ರಾಣಿಗಳನ್ನು ರಕ್ಷಿಸಿ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ರಾಣಿ ಪುನರ್ವಸತಿ ಕೇಂದ್ರ ಆರಂಭಿಸಬೇಕೆಂಬ ಉದ್ದೇಶ ರಜನಿಯವರದ್ದು.ಇವರ ಈ ಕಾರ್ಯ ಶೀಘ್ರ ಈಡೇರಲಿ ಎಂಬುದೇ ಪಬ್ಲಿಕ್ ನೆಕ್ಟ್ ನ ಅಶಯ.

Edited By : Manjunath H D
Kshetra Samachara

Kshetra Samachara

22/10/2020 04:24 pm

Cinque Terre

37.37 K

Cinque Terre

14

ಸಂಬಂಧಿತ ಸುದ್ದಿ