ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಹಿಳೆಯ ಐವತ್ತು ಸಾವಿರ ನಗದು ಹಿಂದಿರುಗಿಸಿ ಮಾನವೀಯತೆ ಮೆರೆದ ಆಟೊ ಚಾಲಕ

ಕಟಪಾಡಿ: ಆಟೋದಲ್ಲಿ ಮಹಿಳೆಯೊಬ್ಬರು ಮರೆತು ಹೋಗಿದ್ದ 50 ಸಾವಿರ ಹಣ ಹಾಗೂ ದಾಖಲೆ ಪತ್ರವನ್ನು ಚಾಲಕ ಹಿಂದಿರುಗಿಸಿ ಮಾನವೀಯತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ.

ಅಂಬಲಪಾಡಿಯ ಜಯ ಶೆಟ್ಟಿ ಉದಾರತೆ ಮೆರದ ಆಟೋ ಚಾಲಕ, ಅಂಬಲಪಾಡಿಯಿಂದ ಜಯಶೆಟ್ಟಿಯವರು ಮಹಿಳೆಯೊಬ್ಬರನ್ನು ತನ್ನ ಬಾಡಿಗೆ ರಿಕ್ಷಾದಲ್ಲಿ ಕಟಪಾಡಿಗೆ ಬಿಟ್ಟು ಮತ್ತೆ ಅಂಬಲಪಾಡಿ ರಿಕ್ಷಾ ನಿಲ್ದಾಣಕ್ಕೆ ಹಿಂದಿರುಗಿದ್ದರು.

ಈ ವೇಳೆ ತನ್ನ ಆಟೋದಲ್ಲಿ ಪ್ಲಾಸ್ಟಿಕ್ ಕವರ್ ಸಿಕ್ಕಿದ್ದು, ಇದರಲ್ಲಿ ಇದ್ದ ಹಣದ ಕಟ್ಟು ಹಾಗೂ ದಾಖಲೆ ಪತ್ರಗಳನ್ನು ಗಮನಿಸಿದ ರಿಕ್ಷಾ ಚಾಲಕ ಜಯಶೆಟ್ಟಿ, ಮತ್ತೆ ಕಟಪಾಡಿಗೆ ಬಂದು ಮಹಿಳೆಯನ್ನು ಹುಡುಕಿ ಹಣ ಹಾಗೂ ದಾಖಲೆ ಪತ್ರವನ್ನು ಹಿಂದಿರುಗಿಸಿದ್ದಾರೆ. ಒಟ್ಟು 50 ಸಾವಿರ ಹಣ ಇತ್ತು ಎಂದು ಮಹಿಳೆ ತಿಳಿಸಿದ್ದು, ಹಣ ಹಿಂದಿರುಗಿಸಿ ಮಾನವೀಯತೆ ಮೆರೆದ ಜಯಶೆಟ್ಟಿ ಅವರಿಗೆ ಮಹಿಳೆ ಕೃತಜ್ಞತೆ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

14/10/2020 04:04 pm

Cinque Terre

15.59 K

Cinque Terre

11

ಸಂಬಂಧಿತ ಸುದ್ದಿ