ವಂಡ್ಸೆ: ಕೊರೊನಾ ಲಾಕ್ ಡೌನ್ ಸಂದರ್ಭ ಮಾಸ್ಕ್ ಗಳನ್ನು ಹೊಲಿದು ಕೊಟ್ಟು ಈ ಮಹಿಳೆಯರು ಇಡೀ ದೇಶಕ್ಕೇ ಮಾದರಿಯಾಗಿದ್ದರು.
ಅಂದು ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ ಆ ಸಹೃದಯಿ ಮಹಿಳೆಯರನ್ನು ಇಂದು ಅದೇ ಗ್ರಾಪಂ ಅಧಿಕಾರಿಗಳು ಬೀದಿಗೆ ತಂದಿದ್ದಾರೆ!
ಉಡುಪಿ ಜಿಲ್ಲೆಯ ಕುಂದಾಪುರದ ವಂಡ್ಸೆ ಗ್ರಾಪಂ ಅಧಿಕಾರಿಗಳು ಮಹಿಳಾ ಸ್ವಾವಲಂಬಿ ಹೊಲಿಗೆ ಕೇಂದ್ರದ ಹೊಲಿಗೆ ಯಂತ್ರ ಸಾಮಗ್ರಿ ಏಕಾಏಕಿ ಬಂದು ಹೊರಗೆ ಹಾಕಿದ್ದಾರೆ. ಯಾವುದೇ ನೋಟಿಸ್ ನೀಡದೆ ಗ್ರಾಪಂ ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 70ಕ್ಕೂ ಅಧಿಕ ಮಹಿಳೆಯರು ಈ ಸ್ವಾವಲಂಬಿ ಹೊಲಿಗೆ ಕೇಂದ್ರದಲ್ಲಿ ದುಡಿಯುತ್ತಿದ್ದರು.
ಈ ಕಟ್ಟಡದಲ್ಲಿ ಈ ಹಿಂದೆ ಪಶು ವೈದ್ಯ ಇಲಾಖೆ ಕಾರ್ಯ ನಿರ್ವಹಿಸುತ್ತಿತ್ತು. ಪಶು ವೈದ್ಯ ಇಲಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾದಾಗ ಈ ಹಿಂದಿದ್ದ ಮಹಿಳಾ ಜಿಲ್ಲಾಧಿಕಾರಿಗಳ ಮುತುವರ್ಜಿಯಲ್ಲಿ ಇದೇ ಕಟ್ಟಡದಲ್ಲಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಮಹಿಳಾ ಸ್ವಾವಲಂಬಿ ಹೊಲಿಗೆ ಕೇಂದ್ರ ಆರಂಭಿಸಲಾಗಿತ್ತು.
ಆದರೆ, ಇದೀಗ ಗ್ರಾಪಂ ಅಧಿಕಾರಿಗಳು ಏಕಾಏಕಿ ಈ ಬಡಪಾಯಿ ಮಹಿಳೆಯರಿಗೆ ಯಾವುದೇ ಪರ್ಯಾಯ ವ್ಯವಸ್ಥೆಗ ಮಾಡದೇ ಸ್ವಾವಲಂಬಿ ಕೇಂದ್ರದಿಂದ ಹೊರ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Kshetra Samachara
11/10/2020 03:00 pm