ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ: ರಸ್ತೆ, ಬಸ್ ತಂಗುದಾಣ ಸ್ವಚ್ಛತಾ ಸೇವಾ ಕೈಂಕರ್ಯ

ಮುಲ್ಕಿ: ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅಭಿಮಾನಿ ಬಳಗ ಪಕ್ಷಿಕೆರೆ ವತಿಯಿಂದ ಪಕ್ಷಿಕೆರೆ ಪೇಟೆಯ ಚರ್ಚ್ ಮುಂಭಾಗದ ರಸ್ತೆ ಇಕ್ಕೆಲ ಸ್ವಚ್ಛಗೊಳಿಸುವ ಸಲುವಾಗಿ "ಪರಿಸರ ನೈರ್ಮಲ್ಯ" ಕಾರ್ಯಕ್ರಮ ಹಾಗೂ ಚರ್ಚ್ ಮುಂಭಾಗದ ಬಸ್ಸು ತಂಗುದಾಣ ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅಭಿಮಾನಿ ಬಳಗ ಪಕ್ಷಿಕೆರೆ ಮುಖ್ಯಸ್ಥ ವಾಲ್ಟರ್ ಡಿ ಸೋಜ ಪಕ್ಷಿಕೆರೆ ಮಾತನಾಡಿ, "ಕೊರೊನಾ ನಡುವೆಯೂ ಸ್ವಚ್ಛತೆ ಪರಿಕಲ್ಪನೆಯಡಿ ಸಂಘಟನೆ ಸದಸ್ಯರು ಈಗಾಗಲೇ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯಶಸ್ವಿಯಾಗಿದೆ ಎಂದರು.

ಈ ಸೇವಾ ಕೈಂಕರ್ಯದಲ್ಲಿ ಸಂಘಟನೆ ಕಾರ್ಯಕಾರಿ ಸಮಿತಿ ಸದಸ್ಯರಾದ ಲಿಗೋರಿ ಸಿಕ್ವೇರಾ, ರಂಗನಾಥ ರಾವ್,ಜೋಯಲ್ ಡಿಸೋಜ, ಶರಣ್ ಡಿಸೋಜ ಜಾಕ್ಸನ್ ಸಲ್ಡಾನ, ಚೇತನ್ ರಾಡ್ರಿಗಸ್,ಭಾಸ್ಕರ್ ಅಮೀನ್ , ಜೋಯಲ್ ಪಿಂಟೊ,ಸುನಿಲ್ ಭಂಡಾರಿ, ಲಾಯ್ಡ್ ಡಿ ಸೋಜ ,ಪ್ರವೀಣ್ ನಝ್ರೆತ್ ಭಾಗವಹಿಸಿದ್ದರು.

Edited By :
Kshetra Samachara

Kshetra Samachara

11/10/2020 01:01 pm

Cinque Terre

24.52 K

Cinque Terre

1