ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ನೇಹಿತನ ಅಂತಿಮ ದರ್ಶನಕ್ಕೆ ಬಂದ ಸಿಎಂ: ವಿಮಾನ ನಿಲ್ದಾಣದಿಂದ ನೇರ ರಾಜು ಪಾಟೀಲ ಮನೆಗೆ...!

ಹುಬ್ಬಳ್ಳಿ: ಸಿಎಂ ಆಪ್ತ ಸ್ನೇಹಿತ ರಾಜು ಪಾಟೀಲ ನಿಧನರಾದ ಹಿನ್ನೆಲೆಯಲ್ಲಿಂದು ಅಂತಿಮ ದರ್ಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ವಿಮಾನ ನಿಲ್ದಾಣದಿಂದ ನೇರವಾಗಿ ಸ್ನೇಹಿತ ರಾಜು ಪಾಟೀಲ ನಿವಾಸಕ್ಕೆ ತೆರಳಿದರು. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಣೆ ಮಾಡಿದ್ದು, ಕುಟುಂಬ ಸಮೇತರಾಗಿ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಿಎಂ ಪತ್ನಿ, ಪುತ್ರ, ಪುತ್ರಿ, ಸಹೋದರಿ ಹಾಗೂ ಕುಟುಂಬ ಸದಸ್ಯರು ಎಲ್ಲರೂ ಆಗಮಿಸಿದ್ದಾರೆ.

Edited By : Shivu K
Kshetra Samachara

Kshetra Samachara

16/09/2021 09:39 am

Cinque Terre

151.52 K

Cinque Terre

6

ಸಂಬಂಧಿತ ಸುದ್ದಿ