ಹುಬ್ಬಳ್ಳಿ: ಅಗಲಿದ ಸ್ನೇಹಿತನ ನೆನೆದು ಸಿಎಂ ಬಸವರಾಜ ಬೊಮ್ಮಾಯಿ ಕಣ್ಣೀರು ಹಾಕಿದ್ದಾರೆ. ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದ ರಾಜು ಪಾಟೀಲ ಅವರು ಸಿಎಂ ಆಪ್ತ ಸ್ನೇಹಿತರಾಗಿದ್ದು, ಸ್ನೇಹಿತನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಗೆಳೆಯನ ಮೃತದೇಹ ಕಂಡ ಸಿಎಂ ಬೊಮ್ಮಾಯಿಗೆ ದುಃಖ ಉಮ್ಮಳಿಸಿ ಬಂದಿದೆ.
ಹೌದು..ರಾಜು ಪಾಟೀಲ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಆತ್ಮೀಯ ಸ್ನೇಹಿತರಾಗಿದ್ದರು. ಕುಟುಂಬ ಸಮೇತವಾಗಿ ಸ್ನೇಹಿತ ಮನೆಗೆ ಭೇಟಿ ನೀಡಿದ ಬೊಮ್ಮಾಯಿ ಅವರು, ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.
Kshetra Samachara
16/09/2021 09:55 am