ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ನಾರಿಯರ ನವರಾತ್ರಿ ನವೋತ್ಸವದ ವಿಜೇತ ಮಹಿಳಾಮಣಿಗಳು ಇವರು

ಸಂಭ್ರಮದ ನವರಾತ್ರಿಯ ಹಬ್ಬವನ್ನು ಎಂಜಾಯ್ ಮಾಡಿದ್ದೇವೆ . 9 ದಿನಗಳಲ್ಲಿ ದೇವಿಯ 9 ಅವತಾರಗಳನ್ನು ಆರಾಧಿಸಿದ್ದೇವೆ. ಜೊತೆಗೆ ಈ ಬಾರಿಯ ಹಬ್ಬವನ್ನು ಪಬ್ಲಿಕ್ ನೆಕ್ಸ್ಟ್ ಜೊತೆ ಸಂಭ್ರಮಿಸಿದ ಪ್ರತಿಯೊಬ್ಬ ಮಹಿಳೆಯರಿಗೂ ಧನ್ಯವಾದಗಳು.

ಇನ್ನು ಈ ಬಾರಿಯ ಹಬ್ಬದ ಖುಷಿಯನ್ನು ಇಮ್ಮಡಿಗೊಳಿಸಲು ಪಬ್ಲಿಕ್ ನೆಕ್ಸ್ಟ್ ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಮಹಿಳೆಯರು ನಾವು ಹೇಳಿದಂತೆಯೇ 9 ದಿನಗಳ ಕಾಲ 9 ಬಣ್ಣದ ಸೀರೆಯನ್ನು ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ನಂಬರಗೆ ಕಳುಹಿಸಿಕೊಟ್ಟಿದ್ದಾರೆ. ಇನ್ನು ಸ್ಪರ್ಧೆಯಲ್ಲಿ ಸಾವಿರಾರು ಮಹಿಳಾ ಮಣಿಗಳು ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿದ್ದು ಹೆಮ್ಮೆಯ ಸಂಗತಿ.

ಇನ್ನು ಪ್ರತಿ ದಿನ ತಪ್ಪದೇ ಫೋಟೋ ಕಳುಹಿಸಿ ಬಹುಮಾನ ಪಡೆದ ನಾರಿಮಣಿಗಳು ಇವರೇ ನೋಡಿ..

ನೇತ್ರಾ ವಿಕಾಸ ಮಠ, ನೇತ್ರಾವತಿ ಎಸ್.ನಾಯ್ಕರ್, ಪದ್ಮಾ ರಾಥೋಡ್, ರಾಜೇಶ್ವರಿ ದೇಸಾಯಿ, ಸ್ಮಿತಾ ನರ್ವಾಟೆ, ಸ್ಪೂರ್ತಿ ಹೂಲಿಕೇರಿ, ಸುಮಾ ಎ.ಆರ್, ವಚನಾ ಬಿ.ಮೆಣಸಗಿ, ಯಶವಂತ ಬೇಟಗೇರಿ, ವಿಶಾಲಾಕ್ಷಿ ಕೆಂಪಗೇರಿ, ಅಕ್ಷತಾ ವಿಜಯಕುಮಾರ, ವೈಷ್ಣವಿ ಶೆಟ್ಟಿ ವಿಜೇತರಾದ ನಿಮಗೆಲ್ಲಾ ಅಭಿನಂದನೆಗಳು..

ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ ಪ್ರಥಮ, ದ್ವಿತೀಯ, ತೃತೀಯ ಎಂದು ಆಯ್ಕೆ ಮಾಡಿಲ್ಲ. ಬದಲಾಗಿ ಸಕ್ರಿಯವಾಗಿ ಭಾಗವಹಿಸಿದವರಿಗೆ ಸೂಕ್ತ ಬಹುಮಾನ ಘೋಷಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

21/10/2021 09:17 pm

Cinque Terre

150.69 K

Cinque Terre

17

ಸಂಬಂಧಿತ ಸುದ್ದಿ