ನವಲಗುಂದ : ಮಣ್ಣು ನಂಬಿ ಕೆಟ್ಟವರಿಲ್ಲ. ನೆಲ ಹಿಡಿದು ದುಡಿದವರು ಬಲ ತುಂಬುವಷ್ಟು ಬೆಳೆಯುತ್ತಾರೆ. ಇನ್ನೊಬ್ಬರ ಹಸಿವು ನೀಗಿಸಿ ಅವರಿಗೆ ಕಸುವು ಬರುವಂತೆ ಮಾಡುತ್ತಾರೆ. ಹಾಗಾಗಿ ಅನ್ನದಾತನ ಕಾಯಕಕ್ಕಿಂತ ಉನ್ನತ ಕಾಯಕ ಬೇರಾವುದಿದೆ ಹೇಳಿ?
ಅಂದ್ ಹಾಗೆ ನೀವು ನೋಡುತ್ತಿರುವ ಅಚ್ಚುಕಟ್ಟಾದ ಕೃಷಿ ಭೂಮಿಯ ದೃಶ್ಯಗಳು ನವಲಗುಂದ ತಾಲೂಕು ಶಲವಡಿ ಗ್ರಾಮದ್ದು. ಗ್ರಾಮದ ಸುಭಾಷ್ ರೆಡ್ಡಿ ಹೆಬಸೂರು ಅವರು ಮಾಡಿದ ಸರಳ, ಪ್ರಗತಿಪರ ಕೃಷಿಯ ಪರಿಣಾಮ ಉತ್ತಮ ಇಳುವರಿ ಮತ್ತು ಆರೋಗ್ಯಕರ ಫಸಲು ಪಡೆಯುತ್ತಿದ್ದಾರೆ.
ಪಿಯುಸಿವರೆಗೆ ಓದಿರುವ ಸುಭಾಷ್ ರೆಡ್ಡಿ ಹೆಬಸೂರ ಅವರು ನಂಬಿದ್ದು ಕೃಷಿ ಕಾಯಕವನ್ನು. ತಮ್ಮ 10 ಎಕರೆ ಒಣಬೇಸಾಯದ ಎರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಅದನ್ನೇ ಜೀವನೋಪಾಯ ಮಾಡಿಕೊಂಡವರು. ಆದ್ರೆ ಆರಂಭಿಕ ಹಂತದಲ್ಲಿ ನಿರೀಕ್ಷಿತ ಮಟ್ಟದ ಇಳುವರಿ ಹಾಗೂ ಲಾಭಾಂಶ ಗಳಿಸಲು ಸುಭಾಷ್ ಅವರಿಗೆ ಸಾಧ್ಯ ಆಗ್ತಾ ಇರಲಿಲ್ಲ.
ಆ ನಂತರ ಸುಭಾಷ್ ಹೂಗಾರ್ ಅವರಿಗೆ ವರದಾನವಾಗಿ ಸಿಕ್ಕಿದ್ದೇ ದೇಶಪಾಂಡೆ ಫೌಂಡೇಶನ್. ಶಲವಡಿ ಗ್ರಾಮದಲ್ಲಿ ದೇಶಪಾಂಡೆ ಫೌಂಡೇಶನ್ ಹಮ್ಮಿಕೊಂಡಿದ್ದ ಸಭೆಗೆ ಹಾಜರಾದ ಸುಭಾಷ್ ಅವರಿಗೆ ಅಲ್ಲಿ ಚರ್ಚೆಯಾದ ಕೃಷಿ ಹೊಂಡ ಯೋಜನೆ ಬಗ್ಗೆ ಅರಿವಿಗೆ ಬಂದಿದೆ.ಈ ಬಗ್ಗೆ ಆಸಕ್ತಿ ಮೂಡಿದೆ. ಆ ಬಗ್ಗೆ ಹೆಚ್ವಿನ ಮಾಹಿತಿ ಪಡೆದ ಸುಭಾಷ್ ರೆಡ್ಡಿ ಅವರು ದೇಶಪಾಂಡೆ ಫೌಂಡೇಶನ ನೆರವಿನೊಂದಿಗೆ ತಮ್ಮ ಕೃಷಿ ಜಮೀನಿನಲ್ಲಿ ಕೃಷಿ ಹೊಂಡ ತೋಡಿಸಿದ್ದಾರೆ. ಈ ಕೃಷಿ ಹೊಂಡದಿಂದ ಅವರಿಗಾದ ಅನುಭವ ಏನು ? ಅದೇ ನೀರಿನಲ್ಲಿ ಅವರು ಮಿಶ್ರ ಬೇಸಾಯ ಮಾಡಿ ಏನೇನೆಲ್ಲ ಬೆಳೆದಿದ್ದಾರೆ ಅನ್ನೋದನ್ನ ಅವರೇ ಹೇಳ್ತಾರೆ ನೋಡಿ.
ಇದಿಷ್ಟೇ ಅಲ್ಲ. ದೇಶಪಾಂಡೆ ಫೌಂಡೇಶನ್ ನಿಂದ ರೈತರಿಗೆ ಉಪಯುಕ್ತ ಮತ್ತು ಸಕಾಲದ ಸಲಹೆಗಳು ಕೂಡ ಸಿಕ್ಕಿದೆ. ಇದೇ ಹೊಂಡದ ನೀರು ಬಳಸಿ ಉಳುಮೆ ಮಾಡುತ್ತಿರುವ ಸುಭಾಷ್ ರೆಡ್ಡಿ ಹೆಬಸೂರ ಅವರು ವರ್ಷಕ್ಕೆ ನಾಲ್ಕರಿಂದ ನಾಲ್ಕೂವರೆ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಈ ಕೃಷಿಹೊಂಡ ನೋಡಿದ ಅವರ ಸ್ನೇಹಿತರು ತಮ್ಮ ಹೊಲದಲ್ಲೂ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಆ ಮಾತನ್ನ ಸುಭಾಷ್ ರೆಡ್ಡಿ ಅವರು ಖುಷಿಯಿಂದ ಹೇಳ್ತಾರೆ.
ದುಡಿಮೆಯ ನಂಬಿ ಬದುಕು- ಅದರಲಿ ದೇವರ ಹುಡುಕು ಅಂತಾ ಚಿತ್ರಸಾಹಿತಿ ಆರ್. ಎನ್ ಜಯಗೋಪಾಲ್ ಹೇಳಿದ್ದಾರೆ. ದೇಶಪಾಂಡೆ ಫೌಂಡೇಶನ್ ನೆರವಿನೊಂದಿಗೆ ಈ ಮಾತನ್ನ ಸುಭಾಷ್ ರೆಡ್ಡಿ ಹೆಬಸೂರು ಅವರು ಕಾರ್ಯರೂಪಕ್ಕೆ ತಂದಿದ್ದಾರೆ. ಅಲ್ಲವೇ?
Kshetra Samachara
20/01/2021 01:51 pm